Thursday, August 13, 2026

BDA Apartments

Home Front Page ಬಿಎಸ್ ವೈ ಪರ ಎಂ.ಬಿ ಪಾಟೀಲ್ ಬ್ಯಾಟಿಂಗ್ ವಿಚಾರ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕೆ.

ಬಿಎಸ್ ವೈ ಪರ ಎಂ.ಬಿ ಪಾಟೀಲ್ ಬ್ಯಾಟಿಂಗ್ ವಿಚಾರ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕೆ.

ಬೆಂಗಳೂರು.20.2021(www.justkannada.in): ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಎಸ್ ಯಡಿಯೂರಪ್ಪ ಪರ ಕಾಂಗ್ರೆಸ್ ನಾಯಕರಾದ ಎಂ.ಬಿ ಪಾಟೀಲ್ ಮತ್ತು ಶಾಮನೂರು ಶಿವಶಂಕರಪ್ಪ ಬ್ಯಾಟ್ ಬೀಸಿದ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.jk

ಈ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಬಿಜೆಪಿ ನಾಯಕತ್ವದ ಬದಲಾವಣೆಯ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡವಳಿಕೆಯು ಸರಿ ಕಾಣುತ್ತಿಲ್ಲ  ಕಾಂಗ್ರೆಸ್ ನಲ್ಲಿನ ಒಂದು ಗುಂಪು ಬಿ.ಎಸ್.ವೈ ಮೇಲೆ ಅನುಕಂಪ ತೋರಿಸಿ, ಬಿ.ಎಸ್.ವೈ ಅವರನ್ನು ಬಿಜೆಪಿ ಗೌರವಯುತವಾಗಿ ನಡೆಸಿಕೊಳ್ಳಿ ಎಂದು ಹೇಳಿದರೆ, ಕಾಂಗ್ರೆಸಿನ ಇನ್ನೊಂದು ಗುಂಪು ಬಿ.ಎಸ್.ವೈ ಅವರ ಮೇಲೆ ದ್ವೇಷ ಸಾಧಿಸಿ ಬಿ.ಎಸ್.ವೈ ಒಬ್ಬ ಭ್ರಷ್ಟ ರಾಜಕಾರಣಿ ಇವರನ್ನು ಕೆಳಗಿಳಿಸುವುದು ಸೂಕ್ತ ಎಂದು ಹೇಳುತ್ತಾರೆ. ಇವರುಗಳಲ್ಲಿ ಯಾರು ಬಿಜೆಪಿ ನಾಯಕರೋ ಅಥವಾ ಯಾರು ಕಾಂಗ್ರೆಸ್ ನಾಯಕರು ಎಂಬುದು ಸಂಶಯವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸಿನಲ್ಲಿ ಕೆಲವೊಂದು ಗುಂಪು ಮೈತ್ರಿ ಸರ್ಕಾರವನ್ನು ಕೆಡುವುದರಲ್ಲಿ ಪಾತ್ರವಹಿಸಿತು. ಆ ಗುಂಪಿಗೆ ಇನ್ನಾದರೂ ಪಕ್ಷದಲ್ಲಿ ನ್ಯಾಯಯುತವಾಗಿ ನಡೆದುಕೊಳ್ಳಿ ಎಂದು  ಹೆಚ್.ಡಿಕೆ ಟಾಂಗ್ ನೀಡಿದರು.

Key words: MB Patil –batting-CM BS Yeddyurappa- issue-Former CM -HD Kumaraswamy -criticized.