Sunday, September 20, 2026

BDA Apartments

ಸಿದ್ಧರಾಮಯ್ಯ ಮತ್ತೆ ಸಿಎಂ ಆಗಬೇಕು- ಶಾಸಕ ಜಮೀರ್ ಅಹ್ಮದ್ ಪುನರುಚ್ಛಾರ BDA JK_Adv BDA Adv
Home Front Page ಸಿದ್ಧರಾಮಯ್ಯ ಮತ್ತೆ ಸಿಎಂ ಆಗಬೇಕು- ಶಾಸಕ ಜಮೀರ್ ಅಹ್ಮದ್ ಪುನರುಚ್ಛಾರ.  

ಸಿದ್ಧರಾಮಯ್ಯ ಮತ್ತೆ ಸಿಎಂ ಆಗಬೇಕು- ಶಾಸಕ ಜಮೀರ್ ಅಹ್ಮದ್ ಪುನರುಚ್ಛಾರ.  

ಬೆಂಗಳೂರು,ಜುಲೈ,15,2021(www.justkannada.in):  ಕಾಂಗ್ರೆಸ್‌ ಪಕ್ಷದಲ್ಲಿ ಮತ್ತೆ ‘ಮುಂದಿನ ಸಿಎಂ ಅಭ್ಯರ್ಥಿ ಕುರಿತು ಚರ್ಚೆ ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಕಾಂಗ್ರೆಸ್​ ಶಾಸಕ, ಜಮೀರ್ ಅಹಮದ್ ಖಾನ್ ಪುನರುಚ್ಛಾರ ಮಾಡಿದ್ದಾರೆ.jk

ಚಾಮರಾಜಪೇಟೆಯಲ್ಲಿ ಇಂದು ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಸಮ್ಮುಖದಲ್ಲೇ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು, ನೀವೆಲ್ಲ ಮತ ಹಾಕಿ ಎಂದು ಹೇಳಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್‌ ಪಕ್ಷದಲ್ಲಿ ‘ಮುಂದಿನ  ಸಿಎಂ ಅಭ್ಯರ್ಥಿ ಬಗ್ಗೆ ತೀವ್ರ ಚರ್ಚೆಯಾಗುತ್ತಿದ್ದು, ಇದರಿಂದ ಅನೇಕ ನಾಯಕರ ಮಧ್ಯೆ ಅಸಮಾಧಾನಕ್ಕೂ ಕಾರಣವಾಗಿತ್ತು. ಈ ಸಂಬಂಧ ಮಧ್ಯ ಪ್ರವೇಶಿಸಿದ್ದ ಕಾಂಗ್ರೆಸ್​​ ಹೈಕಮಾಂಡ್ ‘ಮುಂದಿನ ಮುಖ್ಯಮಂತ್ರಿ’ ಹೇಳಿಕೆಗಳನ್ನು ನೀಡಬಾರದು ಎಂದು ಎಚ್ಚರಿಸಿತ್ತು.​ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಕಡೆಯಿಂದಲೂ ‘ಮುಂದಿನ ಮುಖ್ಯಮಂತ್ರಿ’ ಹೇಳಿಕೆಗಳ ಬಗ್ಗೆ ಆಕ್ಷೇಪಣೆ ವ್ಯಕ್ತವಾಗಿತ್ತು. ಹೈಕಮಾಂಡ್ ಎಚ್ಚರಿಕೆ ನಡುವೆಯೂ ಶಾಸಕ ಜಮೀರ್ ಅವರು ಮತ್ತೆ ಹೇಳಿಕೆ ನೀಡಿದ್ದಾರೆ.

Key words: Siddaramaiah -become -CM –again-MLA-Zamir Ahmad khan