Saturday, August 8, 2026

BDA Apartments

Home Front Page ಸಚಿವ ಸಿ.ಪಿ ಯೋಗೇಶ್ವರ್ ಹೇಳಿಕೆಗಳಿಗೆ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದು ಹೀಗೆ…?

ಸಚಿವ ಸಿ.ಪಿ ಯೋಗೇಶ್ವರ್ ಹೇಳಿಕೆಗಳಿಗೆ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದು ಹೀಗೆ…?

ಬೆಂಗಳೂರು,ಮೇ,28,2021(www.justkannada.in): ರಾಜಕೀಯ ಕಾರಣಕ್ಕಾಗಿ ನನ್ನ ವಿರುದ್ಧ ಕೆಲವರು ಆರೋಪ ಮಾಡುತ್ತಿದ್ದಾರೆ.  ಆದರೆ ನಾನು ನನ್ನ ಕಾರ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸಚಿವ ಸಿ.ಪಿ ಯೋಗೇಶ್ವರ್ ಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಟಾಂಗ್ ನೀಡಿದರು. jk

ನನ್ನ ಇಲಾಖೆಯಲ್ಲಿ ಬೇರೆಯವರ ಹಸ್ತಕ್ಷೇಪವನ್ನ ಸಹಿಸುವುದಿಲ್ಲ. ನನ್ನ ಮಗ ನನ್ನ ಅಧಿಕಾರ ಚಲಾಯಿಸಿದರೇ ಒಪ್ಪಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಪರೋಕ್ಷವಾಗಿ ಬಿವೈ ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಿ.ವೈ ವಿಜಯೇಂದ್ರ, ನಾನು ಬಿಜೆಪಿ ರಾಜ್ಯ ಉಪಾಧ್ಯಕ್ಷನಾಗಿದ್ದೇನೆ.  ನನ್ನ ಕಾರ್ಯ ವ್ಯಾಪ್ತಿಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ನನ್ನ ವಿರುದ್ಧ ಮಾತನಾಡಲು ಕೆಲವರಿಗೆ ಚಟ ಇದೆ ಎಂದು  ಸಚಿವ ಆರ್.ಅಶೋಕ್ ಹೇಳ್ತಾರೆ.  ಆದರೆ ನನ್ನ ಬಗ್ಗೆ ಕೆಲವರಿಗೆ ಪ್ರೀತಿ ಇದೆ .  ಹೀಗಾಗಿ ನನ್ನ ಬಗ್ಗೆ ಕೆಲವರು ಮಾತಾಡ್ತಾರೆ. ರಾಜಕೀಯ ಕಾರಣಕ್ಕಾಗಿ ನನ್ನ ವಿರುದ್ಧ ಆರೋಪ ಮಾಡ್ತಿದ್ದಾರೆ ಎಂದು ಹೇಳಿದರು.

40 ವರ್ಷದ ಹೋರಾಟ ಕಾರ್ಯಕರ್ತರ ಪರಿಶ್ರಮದಿಂದ  ಯಡಿಯೂರಪ್ಪ ಸಿಎಂ ಆಗಿದ್ದಾರೆ.  ಯಡಿಯೂರಪ್ಪ ಸಿಎಂ ಆಗಲು ಕಾರ್ಯಕರ್ತರ ಪರಿಶ್ರಮವಿದೆ. ಬಿಎಸ್ ವೈ ಅನುಭವದ ಮುಂದೆ ನಮ್ಮದು ಏನು ಅಲ್ಲ. ನಾನು ನನ್ನ ಕಾರ್ಯ ವ್ಯಾಪ್ತಿಯಲ್ಲಿ ನನ್ನದೇ ಆದ ಸೇವೆ ಮಾಡ್ತಾ ಇದ್ದೀನಿ ಎಂದು ಸಚಿವ ಸಿ.ಪಿ ಯೋಗೇಶ್ವರ್ ಗೆ ಬಿವೈ ವಿಜಯೇಂದ್ರ ತಿರುಗೇಟು ನೀಡಿದರು.

Key words: bjp- vice president-  BY Vijayendra – Minister- CP Yogeshwar