Monday, September 14, 2026

BDA Apartments

Home Front Page ಜಂತುಹುಳು ನಿವಾರಣಾ ದಿನ : ಮನೆ ಮನೆಗೆ ತೆರಳಿ ಮಾತ್ರೆಗಳನ್ನು ವಿತರಿಸಿ ಜಾಗೃತಿ ಮೂಡಿಸಿದ ಡಿಸಿ...

ಜಂತುಹುಳು ನಿವಾರಣಾ ದಿನ : ಮನೆ ಮನೆಗೆ ತೆರಳಿ ಮಾತ್ರೆಗಳನ್ನು ವಿತರಿಸಿ ಜಾಗೃತಿ ಮೂಡಿಸಿದ ಡಿಸಿ ರೋಹಿಣಿ ಸಿಂಧೂರಿ.

ಮೈಸೂರು, ಮೇ.28,2021(www.justkannada.in): ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಬ್ಲಾಕ್ ಫಂಗಸ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ  ಜಿಲ್ಲೆಯಲ್ಲಿ ‘ಜಂತುಹುಳು ನಿವಾರಣಾ ದಿನ’ವನ್ನು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಬ್ಲಾಕ್ ಫಂಗಸ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದ ಚಾಮುಂಡಿಪುರಂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಮನೆ ಮನೆಗೆ ತೆರಳಿ ಜಂತುಹುಳು ನಿವಾರಣ ಮಾತ್ರೆಯನ್ನು ವಿತರಿಸಿದರು.jk

ಶುಕ್ರವಾರ ಚಾಮುಂಡಿಪುರಂ ಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿ ರೋಹಿಣಿ ಸಿಂಧೂರಿ, ನಗರದಲ್ಲಿಯೇ 6 ಸಾವಿರ ಡಯಾಬಿಟಿಸ್ ಇರುವವರು ಇದ್ದಾರೆ ಎಂದು ತಿಳಿಸಿದರು.

ಕೋವಿಡ್ ನಿಂದ ಇತ್ತೀಚೆಗೆ ಗುಣಮುಖರಾದ, ಡಯಾಬಿಟಿಸ್ ಇರುವವರಿಗೆ ಹಾಗೂ ಕೋಮಾರ್ಬಿಡಿಟಿಸ್ ಇರುವಂತರಲ್ಲಿ ಈ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಇವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಮಟ್ಟದಲ್ಲಿ ಇರುವುದರಿಂದ ಅವರು ಬೇಗ ಈ ಬ್ಲಾಕ್ ಫಂಗಸ್ ತುತ್ತಾಗಬಹುದು ಎಂದರು.

ಕಳೆದೊಂದು ವಾರದಿಂದ ಕಾಣಿಸದ ಬ್ಲಾಕ್ ಫಂಗಸ್ ಪ್ರಕರಣ ಇಂದಿಗೆ 45ಕ್ಕೆ ತಲುಪಿದೆ. ಹೀಗಾಗಿ ನಿರ್ಲಕ್ಷ್ಯ ಮಾಡಬಾರದು. ಬ್ಲಾಕ್ ಫಂಗಸ್ ಗೆ ಚಿಕಿತ್ಸೆ ಪಡೆದರೆ ಗುಣಮುಖವಾಗಲು ಧೀರ್ಘಾವಧಿ ಬೇಕಾಗುತ್ತದೆ ಹಾಗೂ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಪ್ರತಿಯೋಬ್ಬರೂ ಸಹಕರಿಸಬೇಕು ಎಂದು  ಡಿಸಿ ರೋಹಿಣಿ ಸಿಂಧೂರಿ ಹೇಳಿದರು.

Key words: mysore-DC- Rohini Sindhuri- home – distributed -tablet