Thursday, August 13, 2026

BDA Apartments

Home Crime ಸಿಡಿಲು ಬಡಿದು ನಾಲ್ವರು ಸಾವು…

ಸಿಡಿಲು ಬಡಿದು ನಾಲ್ವರು ಸಾವು…

 

ವಿಜಯನಗರ,ಮೇ,4,2021(www.justkannada.in): ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಕೂಡ್ಲಗಿ ತಾಲ್ಲೂಕಿನಲ್ಲಿ ನಡೆದಿದೆ.

ಇಂದು ಸಂಜೆ  ಗುಡುಗು ಸಹಿತ ಮಳೆ ಗಾಳಿಯಲ್ಲಿ ಸಿಡಿಲು ಬಡಿದು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಹರವದಿ‌ ಗ್ರಾಮದ ಒಬ್ಬ ವ್ಯಕ್ತಿ, ನೆಲಬೊಮ್ಮನಹಳ್ಳಿಯ ಇಬ್ಬರು ಹಾಗೂ ಎಂ.ಬಿ. ಅಯ್ಯನಹಳ್ಳಿಯ ಓರ್ವ  ಸಿಡಿಲಿಗೆ ಬಲಿಯಾದ ಘಟನೆ ಜರುಗಿದೆ. ತಾಲ್ಲೂಕಿನ ನೆಲಬೊಮ್ಮನಹಳ್ಳಿ ಗ್ರಾಮದ ಹೊರವಲಯದ ಹೊಲದಲ್ಲಿ ಕುರಿ ಮೇಯಿಸಲು ಹೋಗಿದ್ದ ಚಿನ್ನಾಪುರಿ (40)ಹಾಗೂ ವೀರಣ್ಣ (50) ಮಳೆ ಬರುತ್ತಿದ್ದರಿಂದ ಮರದಡಿ ನಿಂತಾಗ ಅವರಿಬ್ಬರಿಗೂ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ಜರ್ಮಲಿ ಗ್ರಾಮಪಂಚಾಯಿತಿ ಮಾಜಿ ಸದಸ್ಯ ಹರವದಿಯ ರಾಜಶೇಖರ (33) ತಾಲೂಕಿನ ಸೂಲದಹಳ್ಳಿಯಿಂದ ಕ್ಯಾಸನಕೆರೆ ಜರ್ಮಲಿ ರಸ್ತೆಯಲ್ಲಿ ಹೋಗುತ್ತಿರುವಾಗ ಸಿಡಿಲು ಬಡಿದು ಸಾವನ್ನಪ್ಪಿದರೆ. ಆತನ ಜೊತಗಿದ್ದ ವ್ಯಕ್ತಿಗೆ ಗಾಯವಾಗಿದೆ.

ಎಂ ಬಿ ಅಯ್ಯನಹಳ್ಳಿಯ ಪತ್ರೆಪ್ಪ (43) ಮಳೆ ಬರುತ್ತದೆಂದು ಮಾಳಿಗೆಯ ಬಾದಾಳ ಮುಚ್ಚಲು ಹೋದಾಗ ಆತನೂ ಸಹ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಮಹಾಬಲೇಶ್ವರ ಹಾಗೂ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Four -deaths – explosion-rain