Sunday, August 2, 2026

BDA Apartments

Home Front Page ಕೊರೋನಾ ತಡೆಗೆ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ರಾಹುಲ್ ಗಾಂಧಿ ಸಲಹೆ…

ಕೊರೋನಾ ತಡೆಗೆ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ರಾಹುಲ್ ಗಾಂಧಿ ಸಲಹೆ…

ನವದೆಹಲಿ,ಮೇ,4,2021(www.justkannada.in):   ದೇಶದಲ್ಲಿ ಕೊರೋನಾ 2ನೇ ಅಲೆ ವೇಗವಾಗಿ ಹರಡುತ್ತಿದ್ದು,  ಈ ಹಿನ್ನೆಲೆಯಲ್ಲಿ  ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಮಾಡುವುದು ಸೂಕ್ತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.jk

ಈ ಕುರಿತು ಟ್ವಿಟ್ ಮಾಡಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕೋವಿಡ್ ವಿರುದ್ಧ ಹೋರಾಡಲು ಲಾಕ್ ಡೌನ್ ಒಂದೇ ಅಸ್ತ್ರ, ಕೊರೋನಾ ತಡೆಗೆ ಲಾಕ್ ಡೌನ್ ಅನಿವಾರ್ಯ. ನ್ಯಾಯ ಯೋಜನೆ ಜಾರಿ ಜೊತೆಗೆ ಲಾಕ್ ಡೌನ್ ಜಾರಿ ಮಾಡಿ, ಸರ್ಕಾರದ ನಿಷ್ಕ್ರಿಯತೆಯಿಂದ ಅಮಾಯಕರು ಸಾಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.congress-leader-rahul-gandhi-advises-complete-lockdown-corona

ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,57,229 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ . ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 20,282,833,ಕ್ಕೆ ಏರಿಕೆಯಾಗಿದೆ.  ದೇಶದಲ್ಲಿ ದಿನದಿಂದ ದಿನಕ್ಕೆ 2ರಿಂದ 3 ಲಕ್ಷ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ.

Key words: congress leader-Rahul Gandhi –advises- complete lockdown – Corona