Wednesday, October 7, 2026

BDA Apartments

immense respect BDA JK_Adv BDA Adv
Home Front Page ನಗರಸಭೆ ಚುನಾವಣೆ: ಕೊರೋನಾದಿಂದ ಮೃತಪಟ್ಟ ಕಾಂಗ್ರೆಸ್ ಅಭ್ಯರ್ಥಿಗೆ ಭರ್ಜರಿ ಗೆಲುವು…

ನಗರಸಭೆ ಚುನಾವಣೆ: ಕೊರೋನಾದಿಂದ ಮೃತಪಟ್ಟ ಕಾಂಗ್ರೆಸ್ ಅಭ್ಯರ್ಥಿಗೆ ಭರ್ಜರಿ ಗೆಲುವು…

ರಾಮನಗರ,ಏಪ್ರಿಲ್,30,2021(www.justkannada.in):  ರಾಮನಗರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ  ಲೀಲಾ ಗೋವಿಂದರಾಜು ಅವರು ನಿನ್ನೆ ಕೊರೋನಾದಿಂದ ಸಾವನ್ನಪ್ಪಿದರು. ಆದರೆ ಇಂದು ಚುನಾವಣಾ ಫಲಿತಾಂಶ ಹೊರಬಿದ್ದು ಲೀಲಾ ಗೋವಿಂದರಾಜು ಅವರು ಭರ್ಜರಿ ಜಯ ಗಳಿಸಿದ್ದಾರೆ.jk

 ರಾಮನಗರ ನಗರಸಭೆ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಕೊರೊನಾ ಸೋಂಕಿನಿಂದ ನಿನ್ನೆಯಷ್ಟೇ ಮೃತಪಟ್ಟ ಕಾಂಗ್ರೆಸ್ ಅಭ್ಯರ್ಥಿ ಲೀಲಾಗೋವಿಂದರಾಜು ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಲೀಲಾ ಗೋವಿಂದರಾಜು, ಜೆಡಿಎಸ್ ಅಭ್ಯರ್ಥಿ ವಿರುದ್ಧ 917 ಮತಗಳನ್ನು ಪಡೆದು  ಜಯಸಾಧಿಸಿದ್ದಾರೆ.Ramanagar-Municipal –elections-won-Congress candidate - died - corona.

ನಗರಸಭೆ ಚುನಾವಣೆ ಬೆನ್ನಲ್ಲೇ ಲೀಲಾ ಗೋವಿಂದರಾಜುಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಅವರು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ  ಲೀಲಾಗೋವಿಂದ ರಾಜು ಮೃತಪಟ್ಟರು.  ಆದರೆ ಈಗ ಅವರು ಗೆಲುವು ಸಾಧಿಸಿದರೂ ಅದನ್ನ ಸಂಭ್ರಮಿಸಲು ಅವರೇ ಇಲ್ಲದಿರುವುದು  ಅವರ ಕುಟುಂಬಕ್ಕೆ ಮತ್ತು ಬೆಂಬಲಿಗರಿಗೆ ತುಂಬಾ ನೋವಿನ ಸಂಗತಿಯಾಗಿದೆ.

Key words: Ramanagar-Municipal –elections-won-Congress candidate – died – corona.