Wednesday, September 30, 2026

BDA Apartments

ಸಚಿವ ಉಮೇಶ್ ಕತ್ತಿ ರಾಜೀನಾಮೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರ...
Home Front Page ಸಚಿವ ಉಮೇಶ್ ಕತ್ತಿ ರಾಜೀನಾಮೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹ…

ಸಚಿವ ಉಮೇಶ್ ಕತ್ತಿ ರಾಜೀನಾಮೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹ…

ಬೆಂಗಳೂರು,ಏಪ್ರಿಲ್,28,2021(www.justkannada.in):  ಪಡಿತರ ಅಕ್ಕಿ ಕೇಳಿದ ವ್ಯಕ್ತಿಗೆ ಸಾಯೋದು ಒಳ್ಳೆಯದು ಎಂದು ಹೇಳಿಕೆ ನೀಡಿದ ಆಹಾರ ಸಚಿವ ಉಮೇಶ್ ಕತ್ತಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಮಧ್ಯೆ ಉಮೇಶ್ ಕತ್ತಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.jk

ಸಚಿವ ಉಮೇಶ್ ಕತ್ತಿ ಹೇಳಿಕೆ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್,  ರೈತರು ಅಕ್ಕಿ ಕೇಳಿದರೇ ಸಾಯಿ ಅಂತಾ ಹೇಳಿದರೇ ಹೇಗೆ…?  ಉಮೇಶ್ ಕತ್ತಿ ಹೇಳಿಕೆ ಬಿಜೆಪಿಯವರ ಸಂಸ್ಕೃತಿಯನ್ನ ತೋರಿಸುತ್ತದೆ. ಉಮೇಶ್ ಕತ್ತಿ ಕ್ಷಮೆ ಕೇಳೋದು ಬೇಕಾಗಿಲ್ಲ. ಈ ಕ್ಷಣದಿಂದಲೇ ಅವರನ್ನ ಸಚಿವ ಸಂಪುಟದಿಂದ ಕಿತ್ತು ಹಾಕಲಿ ಎಂದು ಒತ್ತಾಯಿಸಿದರು.KPCC president -DK Sivakumar -demands -resignation - minister -Umesh Swathi

Key words: KPCC president -DK Sivakumar -demands -resignation – minister -Umesh Swathi