ಅಪಘಾತದಲ್ಲಿ ತಂದೆ, ಮಗನಿಗೆ ಗಾಯ: ಬೆಡ್ ಸಿಗದೆ ದಿನಪೂರ್ತಿ ಆ್ಯಂಬುಲೆನ್ಸ್‌ ನಲ್ಲೇ ಅಲೆದಾಡಿದ ಗಾಯಾಳುಗಳು…

ಮೈಸೂರು,ಏಪ್ರಿಲ್,24,2021(www.justkannada.in): ಅಪಘಾತದದಲ್ಲಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲು ಬಂದ ತಂದೆ ಮಗನಿಗೆ ಬೆಡ್ ಸಿಗದೇ ಇಬ್ಬರು ಆ್ಯಂಬುಲೆನ್ಸ್ ನಲ್ಲೇ ದಿನಪೂರ್ತಿ ಅಲೆದಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. jk

ರವಿಕುಮಾರ್ (40)  ಪುತ್ರ ವರುಣ್ (10) ಗಾಯಗೊಂಡವರಾಗಿದ್ದು, ಎಚ್.ಡಿ.ಕೋಟೆ ತಾಲೂಕಿನ ಹೊಸ ತೊರವಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ. ರವಿಕುಮಾರ್ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ಈ ನಡುವೆ ನಿನ್ನೆ ರಾತ್ರಿ 7.45 ಸುಮಾರಿನಲ್ಲಿ ಜಕ್ಕಳ್ಳಿ ಬಳಿ ರವಿಕುಮಾರ್ ಮತ್ತು ಪುತ್ರ ವರುಣ್ ಪ್ರಯಾಣಿಸುತ್ತಿದ್ದ ಸ್ಕೂಟರ್‌ ಗೆ ಬೃಹತ್ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ  ಅಪ್ಪನಿಗೆ ಕೈ, ಮಗನಿಗೆ ಕಾಲು ಮುರಿದಿದೆ.

ಈ ವೇಳೆ ರಕ್ತದ ಮಡುವಿನಲ್ಲಿದ್ದ ತಂದೆ, ಮಗನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದರು.  ಆದರೆ ಗಾಯಗೊಂಡ ತಂದೆ ಮಗನಿಗೆ ಕೋವಿಡ್ ನೆಪದಲ್ಲಿ ಚಿಕಿತ್ಸೆಗೆ ನಿರಾಕರಣೆ ಮಾಡಲಾಗಿದೆ. ಹೀಗಾಗಿ ನಿನ್ನೆ ರಾತ್ರಿಯಿಂದಲೂ ಗಾಯಾಳುಗಳು ಬೆಡ್ ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಿದ್ದಾರೆ.

ಇನ್ನು ಹಣವಿಲ್ಲದ ರೋಗಿಗೆ 40- 50 ಸಾವಿರ ರೂ. ಕಟ್ಟುವಂತೆ ಖಾಸಗಿ ಆಸ್ಪತ್ರೆಗಳ ತಾಕೀತು ಮಾಡಿದ್ದು, ಇದರಿಂದಾಗಿ, ಕೆ.ಆರ್.ಆಸ್ಪತ್ರೆ ಬಳಿ ಕುಟುಂಬಸ್ಥರು ಕಂಗಾಲಾಗಿ ನಿಂತ ದೃಶ್ಯ ಕಂಡು ಬಂದಿದೆ.father-son-injured-accident-mysore-ambulance-bed-neglect-treatment

ಈ ಮೂಲಕ ಕೊರೋನಾ ನೆಪದಲ್ಲಿ ನಾನ್‌ ಕೋವಿಡ್ ಪೇಸೆಂಟ್‌ ಗಳ ಪರಿಸ್ಥಿತಿ ಕೇಳೋರೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ, ಅಪಘಾತ, ತುರ್ತು ಪ್ರಕರಣಗಳಿಗೂ ಮೈಸೂರು ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ ಎಂದು ಆರೋಪ ಕೇಳಿ ಬಂದಿದೆ.

Key words: Father – son- injured – accident-mysore-ambulance- bed- Neglect-treatment