Saturday, August 1, 2026

BDA Apartments

Home Front Page ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗಲ್ವಾ: ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ಗುಡುಗು

ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗಲ್ವಾ: ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ಗುಡುಗು

ಬೆಂಗಳೂರು:ಜುಲೈ-7:(www.justkannada.in) ಸಮ್ಮಿಶ್ರ ಸರ್ಕಾರದ ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಬಿಜೆಪಿಯವರು ನಮಗೆ ಏನೂ ಗೊತ್ತಿಲ್ಲ ಎಂದು ಹೆಳುತ್ತಿದ್ದಾರೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗುವುದಿಲ್ಲವೇ ಎಂದು ಟ್ರಬಲ್ ಶೂಟರ್, ಸಚಿವ ಡಿ.ಕೆಶಿವಕುಮಾರ್ ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಶಾಸಕರ ಅಸಮಾಧಾನ, ರಾಜೀನಾಮೆಗಳಿಗೆಲ್ಲ ಔಷಧ, ಪರಿಹಾರ ಕಂಡು ಹಿಡಿಯುತ್ತಿದ್ದೇವೆ. ಹಾಗಾಗಿ ಪರಿಹಾರದ ಬಗ್ಗೆ ಯಾರಾದ್ರೂ ಹೇಳ್ತಾರಾ? ಇದರ ಬಗ್ಗೆ ನಾವು ಏನನ್ನೂ ಮಾತನಾಡುವುದಿಲ್ಲ ಎಂದರು.

ಎಲ್ಲರೂ ಸಭೆಗಳನ್ನು, ಚರ್ಚೆಗಳನ್ನು ಮಾಡುತ್ತಿದ್ದಾರೆ ನೋಡೋಣ. ಹೆಚ್ ಡಿ ಕುಮಾರಸ್ವಾಮಿ 5 ವರ್ಷ ಸಿಎಂ ಎಂದು ಹೇಳಿದ್ದೇವೆ. ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯತ್ನಗಳು ನಡೆದಿದೆ. ಪಕ್ಷ ಮುಂದಿನದ್ದನ್ನು ನಿರ್ಧಾರ ಮಾಡಲಿದೆ. ನಾವು ಕೂಡ ನಮ್ಮ ಸ್ಥಾನ ತ್ಯಾಗಕ್ಕೆ ಸಿದ್ಧರಾಗಬೇಕು ಎಂದು ಹೇಳಿದರು.

ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗಲ್ವಾ: ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ಗುಡುಗು
Coalition government,Rebel MLA’s, Resign,D K Shivakumar