Friday, September 18, 2026

BDA Apartments

ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ, ನಾನಿನ್ನು ಕಾಂಗ್ರೆಸ್’ನಲ್ಲೇ ಇದ್ದೇನೆ: ...
Home Front Page ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ, ನಾನಿನ್ನು ಕಾಂಗ್ರೆಸ್’ನಲ್ಲೇ ಇದ್ದೇನೆ: ರಾಮಲಿಂಗಾ ರೆಡ್ಡಿ

ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ, ನಾನಿನ್ನು ಕಾಂಗ್ರೆಸ್’ನಲ್ಲೇ ಇದ್ದೇನೆ: ರಾಮಲಿಂಗಾ ರೆಡ್ಡಿ

ಬೆಂಗಳೂರು, ಜುಲೈ 07, 2019 (www.justkannada.in): ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ. Adre ಕಾಂಗ್ರೆಸ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ ಎಂದು ಹಿರಿಯ ಕಾಂಗ್ರೆಸ್‌ ನಾಯಕ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 46 ವರ್ಷ ಕಾಂಗ್ರೆಸ್‌ನಲ್ಲಿದ್ದೆ. ನನ್ನ ರಾಜಕೀಯ ಬೆಳವಣಿಗೆಗೆ ಕಾಂಗ್ರೆಸ್‌ ಕೂಡ ಕಾರಣವಾಗಿದೆ. ನಾನು ಕೆಲ ಬೆಳವಣಿಗೆಗಳಿಂದ ಬೇಸತ್ತು, ಸ್ವಇಚ್ಛೆಯಿಂದ ರಾಜೀನಾಮೆ ನೀಡಬೇಕಾಯಿತು ಎಂದು ತಿಳಿಸಿದ್ದಾರೆ.

ನಾನು ಕೆ.ಸಿ.ವೇಣಗೋಪಾಲ್‌ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ, ಎಲ್ಲವನ್ನೂ ಅವರಿಗೆ ಹೇಳಿದ್ದೇನೆ, ಅವರಿಗೆ ಎಲ್ಲವೂ ಗೊತ್ತಿತ್ತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆಫೋನ್‌ ಮೂಲಕ ಮಾತನಾಡಿದ್ದೇನೆ, ಎಲ್ಲಾ ವಿದ್ಯಮಾನಗಳು ಅವರಿಗೂ ಗೊತ್ತಿತ್ತು. ಏನಾಗಲಿದೆ ಎನ್ನುವುದು ಮುಂದಕ್ಕೆ ಗೊತ್ತಾಗುತ್ತದೆ ಎಂದು ಕುತೂಹಲ ಮೂಡಿಸಿದರು.