ಬೆಂಗಳೂರು,ಮಾರ್ಚ್,21,2021(www.justkannada.in) : ಎಲ್ಲ ವಿಷಯದಲ್ಲೂ ಕರ್ನಾಟಕಕ್ಕೆ ಬಾರಿ ಅನ್ಯಾಯವಾಗಿದೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಇಂದ ಕಲ್ಯಾಣ ಕರ್ನಾಟಕಕ್ಕೆ ಹಲವು ಯೋಜನೆಗಳು ತಪ್ಪಿದೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಬೇಸರವ್ಯಕ್ತಪಡಿಸಿದ್ದಾರೆ.
ಕಲ್ಬುರ್ಗಿ ರೈಲ್ವೆ ವಿಭಾಗೀಯ ಕಚೇರಿ, ಏಮ್ಸ್ ಆಸ್ಪತ್ರೆ ಬೇರೆಡೆಗೆ ಸ್ಥಳಾಂತರ, ಸೆಂಟರ್ ಫಾರ್ ಎಕ್ಸೆಲೆನ್ಸ್ ಬೆಂಗಳೂರಿಗೆ ಎತ್ತಂಗಡಿ, ನಿರ್ಮಾಣವಾಗದ ಜವಳಿ ಪಾರ್ಕ್, ಇಂಧನ ಅಭಿವೃದ್ಧಿ ಕಚೇರಿ ಎತ್ತಂಗಡಿ, ರಾಷ್ಟ್ರೀಯ ಹೂಡಿಕೆ, ಉತ್ಪಾದನಾ ವಲಯ, ಬೀದರ್ ನಿಂದ ಸಿಪೆಟ್ ಬೇರೆಕಡೆಗೆ ಸ್ಥಳಾಂತರ, ರಾಯಚೂರಿನಿಂದ ಐಐಟಿ ಧಾರವಾಡಕ್ಕೆ ಸ್ಥಳಾಂತರ, ಬೀದರ್ ನ ಪಶುವೈದ್ಯಕೀಯ ವಿವಿ ವಿಭಜನೆ ಚರ್ಚೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಅನುದಾನಕ್ಕೆ ಕತ್ತರಿ ಬಿದ್ದಿದೆ. ಭರ್ತಿಯಾಗದೆ ಸಾವಿರಾರು ಹುದ್ದೆಗಳು ಹಾಗೇ ಉಳಿದಿವೆ ಎಂದು ಟ್ವೀಟ್ ಮೂಲಕ ಆಕ್ರೋಶವ್ಯಕ್ತಪಡಿಸಿದ್ದಾರೆ.

key words : central-government-Stepmother-times-unfair-Karnataka-Member-Rajya Sabha-G.C.Chandrasekhar






