Sunday, August 30, 2026

BDA Apartments

Home Front Page ಶಿವಮೊಗ್ಗಕ್ಕೆ ಕೊಟ್ಟಂತೆ ನಮಗೂ ಸಮಾನ ಅನುದಾನ ನೀಡಿ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ…

ಶಿವಮೊಗ್ಗಕ್ಕೆ ಕೊಟ್ಟಂತೆ ನಮಗೂ ಸಮಾನ ಅನುದಾನ ನೀಡಿ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ…

ಬೆಂಗಳೂರು,ಮಾರ್ಚ್,17,2021(www.justkannada.in):  ಶಿವಮೊಗ್ಗಕ್ಕೆ ಕೊಟ್ಟಂತೆ ನಮ್ಮ ಕ್ಷೇತ್ರಕ್ಕೂ ಸಮಾನ ಅನುದಾನ ನೀಡಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.jk

ವಿಧಾನಸಭೆ ಕಲಾಪದಲ್ಲಿ ಇಂದು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರ ಜಿಲ್ಲೆಗೆ 217 ಕೋಟಿ ರೂ ಅನುದಾನ ನೀಡಿದ್ದೀರಿ. ಆದರೆ ಶಿವಮೊಗ್ಗ ಜಿಲ್ಲೆಗೆ 320 ಕೋಟಿ ರೂ ನೀಡಿದ್ದೀರಿ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ  ಎಂಬಂತೆ ತಾರತಮ್ಯ ಮಾಡಲಾಗುತ್ತಿದೆ. ಈ ತಾರತಮ್ಯ ಸಲ್ಲದು. ನಮಗೂ ಸಮಾನ ಅನುದಾನ ನೀಡಿ ಎಂದು ಆಗ್ರಹಿಸಿದರು.Give - same -grant –MLA-Basanagowda Patil Yatnal-Session

ಈ ವೇಳೆ ಸದನದಲ್ಲಿ ಉತ್ತರಿಸಿದ ಸಚಿವ ಆನಂದ್ ಸಿಂಗ್, ಶಿವಮೊಗ್ಗ, ವಿಜಯಪುರಕ್ಕೆ ತಾರತಮ್ಯ ಮಾಡಿಲ್ಲ. ಸಿಎಂ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು. ಹಾಗೆಯೇ ವಿಜಯಪುರಕ್ಕೆ ವಿಮಾನ ನಿಲ್ದಾಣದ ಅವಶ್ಯಕತೆ ಇದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

Key words: Give – same -grant –MLA-Basanagowda Patil Yatnal-Session