Sunday, August 2, 2026

BDA Apartments

Home Front Page ಮೈತ್ರಿ ವಿಚಾರದಲ್ಲಿ ತಪ್ಪು ಮಾಡಿಲ್ಲ: ನೋಟಿಸ್ ಗೆ ತಕ್ಕ ಉತ್ತರ ಕೊಡಲು ಸಿದ್ಧ: ಶಾಸಕ ತನ್ವೀರ್...

ಮೈತ್ರಿ ವಿಚಾರದಲ್ಲಿ ತಪ್ಪು ಮಾಡಿಲ್ಲ: ನೋಟಿಸ್ ಗೆ ತಕ್ಕ ಉತ್ತರ ಕೊಡಲು ಸಿದ್ಧ: ಶಾಸಕ ತನ್ವೀರ್ ಸೇಠ್ 

ಮೈಸೂರು,ಫೆಬ್ರವರಿ,26,2021(www.justkannada.in) : ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಯಾರು ಮಾಡುತ್ತಾರೆ. ನಮ್ಮದು ತ್ಯಾಗದ ಪಕ್ಷ. ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಅವರಿಗೆ ಯಾರೋ ಕಿವಿ ಕಚ್ಚುವ ಕೆಲಸ ಮಾಡಿದ್ದಾರೆ ಎಂದು ಶಾಸಕ ತನ್ವೀರ್ ಸೇಠ್ ಕಿಡಿಕಾರಿದ್ದಾರೆ.

jkಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಕುರಿತಂತೆ ತಮಗೆ ನೋಟಿಸ್ ನೀಡುತ್ತಾರೆ ಎಂಬ ವಿಚಾರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ಎಲ್ಲವನ್ನು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ

ಪಾಲಿಕೆ ಚುನಾವಣೆ ಸಂಬಂಧಿಸಿದಂತೆ ಎಲ್ಲವನ್ನು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಅವರ ಸೂಚನೆಯಂತೆ ಕೆಲಸ ಮಾಡಿದ್ದೇನೆ. ಇದರಲ್ಲಿ ನನ್ನದು ಯಾವುದೇ ವೈಯಕ್ತಿಕ ವಿಚಾರವಿಲ್ಲ. ಪಕ್ಷದ ಹಿತ ಕಾಯುವ ನಿಟ್ಟಿನಲ್ಲಿ ನಾನು ನಿರ್ಧಾರ ಮಾಡಿದ್ದೇನೆ. ಪಕ್ಷದ ಕಾರ್ಯಾದಕ್ಷ ಧ್ರುವನಾರಾಯಣ್ ಕೂಡ ವೀಕ್ಷಕರಾಗಿದ್ರು. ಪಕ್ಷದ ವರಿಷ್ಠರು ಮೇಯರ್ ಗಿರಿ ನಮ್ಮದಾಗ ಬೇಕು ಅಂತ ಹೇಳಿದರು. ಆದರೆ ಕೊನೆಗಳಿಗೆಯಲ್ಲಿ ಆದ ಬದಲಾವಣೆಯಿಂದ ಈ ನಿರ್ಧಾರ ಮಾಡಿದೆ ಎಂದರು.

ಪಕ್ಷ ನೋಟೀಸ್ ನಲ್ಲಿ ಏನು ಕೇಳ್ತಾರೊ ಅದಕ್ಕೆ ನಾನು ಉತ್ತರ ನೀಡಲು ಸಿದ್ಧ….

ಪಕ್ಷ ನೋಟೀಸ್ ನಲ್ಲಿ ಏನು ಕೇಳ್ತಾರೊ ಅದಕ್ಕೆ ನಾನು ಉತ್ತರ ನೀಡಲು ಸಿದ್ಧ. ಪಕ್ಷದಲ್ಲಿ ಬಣ ರಾಜಕಾರಣ ಇದ್ರೆ ಕೆಲವರು ವೈಯಕ್ತಿಕ ಹಿತ ಕಾಪಾಡಿಕೊಳ್ಳುವ ಹಾಗೂ ಅವರ ಪ್ರತಿಷ್ಠೆಗೆ ನಾನು ಬಲಿಯಾಗಲು ಬಿಡಲ್ಲ. ನಾನು ಯಾರ ವಿರುದ್ಧವೂ ಮಾತನಾಡಲ್ಲ ಯಾರು ನನಗೆ ಸಮಾಜಯಿಷಿ ಕೇಳ್ತಾರೊ ಅವರಿಗೆ ಉತ್ತರ ನೀಡುತ್ತೇನೆ. ಮೈಸೂರಿನ ನಾಗರೀಕರ ಹಿತದೃಷ್ಟಿಯಿಂದ ನಾನು ಕೊನೆ ಕ್ಷಣದಲ್ಲಿ ನಿರ್ಧಾರ ತೆಗೆದೆಕೊಂಡೆ. ಈ ಎಲ್ಲಾ ವಿಚಾರವನ್ನು ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ತನ್ವೀರ್ ಸೇಠ್ ಹೇಳಿದರು.

ನಾವು ಅಧಿಕಾರದ ಹಿಂದೆ ಹೋಗಿಲ್ಲ. ನಾವು ಅಧಿಕಾರವನ್ನು ತ್ಯಾಗ ಮಾಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತ್ಯಾಗಕ್ಕೂ ಸಿದ್ದ. ನನ್ನ ಪಕ್ಷದ ವರ್ಚಸ್ ಬೆಳೆಸಲು ನಾನು ಬದ್ಧ. ಸಂವಿಧಾನದ ಉಳಿಸುವ ಕೆಲಸ ಮಾಡಿದ್ದೇವೆ. ನಗರದ ಬೆಳವಣಿಗೆ ಮಾರಕವಾದ ಶಕ್ತಿಗಳನ್ನು ಅಧಿಕಾರದಿಂದ ದೂರ ಇಟ್ಟಿದ್ದೇವೆ. ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕಿತ್ತು. ಆ ಕೆಲವನ್ನು ನಾನು ಮಾಡಿದ್ದೇನೆ ಎಂದು ತನ್ವೀರ್ ಸೇಠ್ ತಿಳಿಸಿದರು.

 

War-time-Weapon-MLA-Tanveer Seth

ಯಾರ ಶಕ್ತಿಯನ್ನು ಯಾರು ಕುಗ್ಗಿಸಲು ಸಾಧ್ಯವಿಲ್ಲ

ಸಿದ್ದರಾಮಯ್ಯನವರ ಶಕ್ತಿ ಕುಂದಿಸುವ ವಿಚಾರ, ಯಾರ ಶಕ್ತಿಯನ್ನು ಯಾರು ಕುಗ್ಗಿಸಲು ಸಾಧ್ಯವಿಲ್ಲ. ಈ ಕುರಿತು ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಕ್ಕೆ, ಪ್ರಜಾಪ್ರಭುತ್ವ ಉಳಿಸಿಕೊಳ್ಳುವುದಕ್ಕೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

key words : War-time-Weapon-MLA-Tanveer Seth