ಹಿಂದುಳಿದ ವರ್ಗಗಳ 2ಎ – ಯಥಾಸ್ಥಿತಿ ಕಾಯ್ದುಕೊಳ್ಳಿ : ಫೆ.22ರಂದು ಶಾಂತಿಯುತ ಪ್ರತಿಭಟನೆಗೆ ಕರೆ

 

ಭಟ್ಕಳ, ಫೆ.08, 2021 : (www.justkannada.in news ) : ಪಂಚಮಸಾಲಿ ಲಿಂಗಾಯಿತರ ಪ್ರತಿಭಟನೆ ಬೆನ್ನಲ್ಲೇ ಇದೀಗ, ‘ಹಿಂದುಳಿದ ವರ್ಗಗಳ 2ಎ ಅಡಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಒತ್ತಾಯಿಸಿ ಫೆ.22ರಂದು ಭಟ್ಕಳದಲ್ಲಿ ಶಾಂತಿಯುತವಾಗಿ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಭಟ್ಕಳದ ಹಿಂದುಳಿದ ವರ್ಗಗಳ (2ಎ) ಹಿತರಕ್ಷಣಾ ವೇದಿಕೆಯು ಭಾನುವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಜಿರೆಯ ಶ್ರೀರಾಮ ಕ್ಷೇತ್ರದ ಮಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದಿಷ್ಟು..

jk

‘ಪಂಚಮಸಾಲಿ ಲಿಂಗಾಯತರನ್ನು ಪ್ರವರ್ಗ 2ಎ ಗೆ ಸೇರಿಸಿದರೆ, ಹಾಲಿ ಮೀಸಲು ಪ್ರಮಾಣವನ್ನು ಹೆಚ್ಚಿಸಬೇಕು. ಈ ಅಂಶವನ್ನು ಕೇಂದ್ರ ಸರ್ಕಾರ ಗಮನಿಸಬೇಕು ಎಂದರು.
ಖಾವಿಧಾರಿ ಸನ್ಯಾಸಿಗಳು ಎಂದೂ ಹೋರಾಟಗಳ ಮುಂದಾಳತ್ವ ವಹಿಸಬಾರದು. ಬದಲಿಗೆ ಅವರು ಸಮಾಜದ ಮಾರ್ಗದರ್ಶಕರಾಗಿ ಇರಬೇಕು. ‘ಬೇಡಿಕೆಗಳ ಈಡೇರಿಕೆಗೆ ಮಹಾತ್ಮ ಗಾಂಧೀಜಿ ಶಾಂತಿಯುತವಾಗಿ ಹೋರಾಡಿದ್ದರು. ಒಬ್ಬರ ಹೋರಾಟದಿಂದ ಮತ್ತೊಬ್ಬರಿಗೆ ತೊಂದರೆಯಾಗಬಾರದು. ಸಂವಿಧಾನಾತ್ಮಕವಾಗಿ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲೇ ಸರ್ಕಾರದ ಗಮನ ಸೆಳೆಯಬೇಕು. ನಾರಾಯಣ ಗುರುಗಳೂ ಅದನ್ನೇ ಮಾಡಿದ್ದರು.

ujere-brahmananda-saraswathi-swamiji-2-a-reservation-protest-feb.22

ಮಠಾಧೀಶರು ಶೋಷಿತರನ್ನು ಮೇಲೆತ್ತುವ ಕೆಲಸ ಮಾಡಬೇಕು. ಎತ್ತರದಲ್ಲಿರುವ ಬಹುಸಂಖ್ಯಾತ ‘ಆನೆ’ ಬಿದ್ದರೆ ಸಣ್ಣಪುಟ್ಟ ಜನಾಂಗಗಳು ಇಲಿ, ಇರುವೆಗಳಂತೆ ಅಪ್ಪಚ್ಚಿಯಾಗುತ್ತವೆ. ಸರ್ಕಾರಗಳು, ಎಲ್ಲ ಪಕ್ಷಗಳು ಮತಕ್ಕಾಗಿ ಕಣ್ಮುಚ್ಚಿ ಕುಳಿತಿವೆ. ಇದರಿಂದಾಗಿ ಆಯಾ ಜಾತಿಗಳ ಹಿತರಕ್ಷಣೆ ಮುಖ್ಯವಾಗುತ್ತಿದೆ’ ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ‘ಹಿಂದುಳಿದ ವರ್ಗಗಳ 2ಎ ಅಡಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸುವ ಸಲುವಾಗಿ ಇದೇ ಫೆ.22 ರಂದು ಭಟ್ಕಳದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

oooooo

key words : ujere-brahmananda-saraswathi-swamiji-2-a-reservation-protest-feb.22