Sunday, September 13, 2026

BDA Apartments

ನೂರಕ್ಕೆ ನೂರರಷ್ಟು ಚಿತ್ರಮಂದಿರ ತುಂಬಲು ಅವಕಾಶ ಕೊಡಿ” : ಸಿಎಂಗೆ ಸಚಿವ ಬಿ.ಸಿ....
Home Front Page ನೂರಕ್ಕೆ ನೂರರಷ್ಟು ಚಿತ್ರಮಂದಿರ ತುಂಬಲು ಅವಕಾಶ ಕೊಡಿ” : ಸಿಎಂಗೆ ಸಚಿವ ಬಿ.ಸಿ.ಪಾಟೀಲ್ ಮನವಿ

ನೂರಕ್ಕೆ ನೂರರಷ್ಟು ಚಿತ್ರಮಂದಿರ ತುಂಬಲು ಅವಕಾಶ ಕೊಡಿ” : ಸಿಎಂಗೆ ಸಚಿವ ಬಿ.ಸಿ.ಪಾಟೀಲ್ ಮನವಿ

ಮೈಸೂರು,ಜನವರಿ,03,2021(www.justkannada.in) : ಕೊರೋನಾ ಹೊಡೆತದಿಂದ ಚಿತ್ರರಂಗ ಕೊಚ್ಚಿಹೋಗಿದೆ. ರಾಜ್ಯದಲ್ಲಿಯೂ ನೂರಕ್ಕೆ ನೂರರಷ್ಟು ಚಿತ್ರಮಂದಿರ ತುಂಬಲು ಅವಕಾಶ ಕೊಡುವಂತೆ ಚಿತ್ರರಂಗದ ಪರವಾಗಿ ಸಿಎಂ ಬಿ.ಎಸ್.ವೈ ಅವರಿಗೆ ಮನವಿ ಮಾಡಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.jk

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಂದಾಗಿ ಚಿತ್ರರಂಗಕ್ಕೆ ಸಾಕಷ್ಟು ನಷ್ಟವುಂಟಾಗಿದೆ. ಬೇರೆ, ಬೇರೆ ಚಟುವಟಿಕೆ ಸಭೆ ಸಮಾರಂಭಗಳು ಎಸಿ ಸಭಾಂಗಣಗಳಲ್ಲಿಯೇ ನಡೆಯುತ್ತಿವೆ. ಜನರೂ ಹೆಚ್ಚಾಗಿ ಸೇರುತ್ತಿದ್ದಾರೆ. ಕೇಂದ್ರ ಸರ್ಕಾರ ಶೇ.100 ರಷ್ಟು ಚಿತ್ರಮಂದಿರ ತುಂಬಲು ಅವಕಾಶ ನೀಡಿದೆ. ಹೀಗಾಗಿ, ನಮ್ಮ ರಾಜ್ಯದಲ್ಲಿಯೂ ಸಹ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಜನ ತುಂಬಲು ಅವಕಾಶ ನೀಡುವಂತೆ ಮತ್ತೊಮ್ಮೆ ಮನವಿ ಮಾಡುವುದಾಗಿ ಹೇಳಿದರು.100 percent-Movie-Theater-fill-chance-CM-Minister-B.C.PATEL-Appeal 

ಇಂತಹ ಸಂದರ್ಭದಲ್ಲಿ ಆರೋಗ್ಯ ಮುಖ್ಯ. ಹೀಗಾಗಿ, ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕ್ರಮ ಜರುಗಿಸಿ ಶೇ.100 ರಷ್ಟು ಚಿತ್ರಮಂದಿರ ತುಂಬಲು ಅವಕಾಶ ನೀಡಲಿ. ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಶೇ.100ರಷ್ಟು ಚಿತ್ರಮಂದಿರ ತುಂಬಲು ಅವಕಾಶ ನೀಡಿದಾಗ ನಿರ್ಮಾಪಕರ ಸಂಘದ ಅಧ್ಯಕ್ಷರ ಮನವಿ ಮೇರೆಗೆ ಇದನ್ನು ಸಿಎಂ ಗಮನಕ್ಕೆ ತರಲಾಗಿತ್ತು. ಮತ್ತೊಮ್ಮೆ ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

 key words : “100 percent-Movie-Theater-fill-chance-CM-Minister-B.C.PATEL-Appeal