“ರಾಜ್ಯದ ಚಿಲ್ಲರೆ ಮದ್ಯ ಮಾರಾಟಗಾರರ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ”

ಮೈಸೂರು,ಜನವರಿ,02,2021(www.justkannada.in) : ರಾಜ್ಯದ ಚಿಲ್ಲರೆ ಮದ್ಯ ಮಾರಾಟಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ. ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು.jk

ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಅಸೋಸಿಯೇಷನ್ ಸದಸ್ಯರು, ಕೊರೊನಾ ಸಂದರ್ಭದಲ್ಲಿ ನಮಗೆ ಯಾವುದೇ ರೀತಿ ಸರ್ಕಾರದಿಂದ ನೆರವು ಸಿಕ್ಕಿಲ್ಲ ಎಂದು ಕಿಡಿಕಾರಿದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಮದ್ಯ ವರ್ತಕರ ಸಂಘದ ಅಧ್ಯಕ್ಷ ಎಸ್. ಗುರುಸ್ವಾಮಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಬಾಗಿಲು ಮುಚ್ಚಿದ್ದರೂ ಪಾವತಿ ಮಾಡಿದ್ದ ಲೈಸೆನ್ಸ್ ಫೀಜ್ ಅನ್ನು ಮರುಪಾವತಿ ಮಾಡಬೇಕು. ಆನ್‌ಲೈನ್ ಮದ್ಯ ಮಾರಾಟದ ಪ್ರಸ್ತಾಪವನ್ನು ಕೈ ಬಿಡಬೇಕು. ಇನ್ನು ಶೇಕಡಾ ೨೦ರಷ್ಟಿದ್ದ ಲಾಭಾಂಶದ ಪ್ರಮಾಣವನ್ನು ಅನ್ನು ೧೦ಕ್ಕೆ ಇಳಿಸಲಾಗಿದೆ. ಅಂಗಡಿಗಳ ಬಾಡಿಗೆಯನ್ನೂ ಸಹ ಹೆಚ್ಚಳ ಮಾಡಲಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.state's-retail-Liquor-vendor-demands-fulfillment-Protest ಸಿಎಲ್ ೭ ಗಳ ಹೆಚ್ಚಳದಿಂದ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಅಧಿಕಾರಿ ಹಾಗೂ ಪೊಲೀಸರ ಹಸ್ತಕ್ಷೇಪದಿಂದ ವ್ಯಾಪಾರ ನಡೆಸಲು ದುಸ್ತರವಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

key words : state’s-retail-Liquor-vendor-demands-fulfillment-
Protest