Wednesday, August 19, 2026

BDA Apartments

Home Front Page ಪರೋಕ್ಷವಾಗಿ ಸಚಿವನಾಗುವ ಬಯಕೆ ವ್ಯಕ್ತಪಡಿಸಿದ ಶಾಸಕ ಎಲ್. ನಾಗೇಂದ್ರ….

ಪರೋಕ್ಷವಾಗಿ ಸಚಿವನಾಗುವ ಬಯಕೆ ವ್ಯಕ್ತಪಡಿಸಿದ ಶಾಸಕ ಎಲ್. ನಾಗೇಂದ್ರ….

ಮೈಸೂರು,ಜನವರಿ,14,2021(www.justkannada.in):   ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೆ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮೈಸೂರು ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಪರೋಕ್ಷವಾಗಿ ಸಚಿವನಾಗುವ ಬಯಕೆ ವ್ಯಕ್ತಪಡಿಸಿದ್ದಾರೆ.jk-logo-justkannada-mysore

ಸಚಿವನಾಗುವ ಆಸೆ ಎಲ್ಲಾ ಶಾಸಕರಿಗೂ ಇರುತ್ತೆ, ಕೊಟ್ಟರೆ ಬೇಡ ಅನ್ನೋಕೆ ಆಗುತ್ತಾ..? ಎಂದು ಹೇಳುವ ಮೂಲಕ ಶಾಸಕ ಎಲ್. ನಾಗೇಂದ್ರ ಪರೋಕ್ಷವಾಗಿ ಸಚಿವನಾಗುವ ಬಯಕೆ ವ್ಯಕ್ತಪಡಿಸಿದ್ದಾರೆ.

ಮೈಸೂರು ಭಾಗಕ್ಕೆ ಸಚಿವ ಸ್ಥಾನದಲ್ಲಿ ಪ್ರಾತಿನಿಧ್ಯ ನೀಡದೇ ಇರುವುದರ ಕುರಿತು ಪ್ರತಿಕ್ರಿಯಿಸಿದ ಶಾಸಕ ನಾಗೇಂದ್ರ, ಮೈಸೂರು ಭಾಗಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ, ನಿಜ. ನಾನು ಇದ್ದೇನೆ, ರಾಮದಾಸ್ ಅವರೂ ಇದ್ದಾರೆ.  ನಾವೂ ಬಹಳ ವರ್ಷಗಳಿಂದ ಪಕ್ಷದಲ್ಲಿ ಇದ್ದೇವೆ, ನಮಗೂ ಅವಕಾಶ ಸಿಕ್ಕಿಲ್ಲ. ಯಡಿಯೂರಪ್ಪನವರೇ ಹೇಳಿದ್ದಾರೆ. ಯಾರಿಗೆಲ್ಲಾ ಸಮಸ್ಯೆ ಆಗಿದೆಯೋ ಅವರೆಲ್ಲಾ ರಾಷ್ಟ್ರೀಯ ಅಧ್ಯಕ್ಷರನ್ನೊ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಅಂತ. ಪಕ್ಷದ ಚೌಕಟ್ಟಿನಲ್ಲಿ ಯಾರು ಬೇಕಾದರೂ ಭೇಟಿ ಮಾಡಬಹುದು. ಎಲ್ಲರಿಗೂ ಅವಕಾಶವಿದೆ ಎಂದರು.MLA-L.Nagendra- become - minister -indirectly-told

ಸಚಿವ ಸ್ಥಾನ ಸಿಗದ್ದಕ್ಕೆ ವಿಶ್ವನಾಥ್ ಬಹಿರಂಗ ಅಸಮಾಧಾನ ವಿಚಾರ  ಕುರಿತು ಪ್ರತಿಕ್ರಿಯಿಸಿದ ಶಾಸಕ ನಾಗೇಂದ್ರ, ವಿಶ್ವನಾಥ್ ಅವರು ಹಿರಿಯರಿದ್ದಾರೆ, ಅವರಿಗೆ ಏನೂ ಹೇಳುವ ಅವಶ್ಯಕತೆ ಇಲ್ಲ. ಅವರಿಗೆ ಕೇವಲ ಸಲಹೆ ಮಾತ್ರವೇ ನೀಡಬಹುದು. ವಿಶ್ವನಾಥ್ ಅವರಿಗೆ ನಮ್ಮ ಪಕ್ಷದ ಸಿದ್ಧಾಂತ ಗೊತ್ತಿಲ್ಲ. ಅವರು ಬೇರೆ ಬೇರೆ ಪಕ್ಷಗಳಿಗೆ ಹೋಗಿ ಬಂದಿದ್ದಾರೆ. ಪಕ್ಷದಲ್ಲಿ ಎಲ್ಲದ್ದಕ್ಕೂ ಶಿಸ್ತು ಎನ್ನುವುದಿದೆ. ಎಲ್ಲವನ್ನೂ ರಾಜ್ಯದ ಜನತೆಗೆ ಹೇಳುವ ಅವಶ್ಯಕತೆ ಇಲ್ಲ. ಪಕ್ಷದ ಚೌಕಟ್ಟಿನಲ್ಲಿ, ನಾಲ್ಕು ಗೋಡೆಗಳ ಮಧ್ಯದಲ್ಲಿ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ವಿಶ್ವನಾಥ್ ಅವರು ಸಹನೆಯಿಂದ ಇರಬೇಕು ಎಂದು ಸಲಹೆ ನೀಡಿದರು.

Key words: MLA-L.Nagendra- become – minister -indirectly-told