Saturday, August 8, 2026

BDA Apartments

Home Front Page “ಆಟೋ ಹರಿಸಿ ವ್ಯಕ್ತಿ ಕೊಲೆ, ಇಬ್ಬರು ಆರೋಪಿಗಳು ಅಂದರ್”

“ಆಟೋ ಹರಿಸಿ ವ್ಯಕ್ತಿ ಕೊಲೆ, ಇಬ್ಬರು ಆರೋಪಿಗಳು ಅಂದರ್”

ಮೈಸೂರು,ಜನವರಿ,14,2021(www.justkannada.in): ಆಟೋ ಹರಿಸಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಎನ್.ಆರ್ ಪೊಲೀಸರು ಯಶಸ್ವಿಯಾಗಿದ್ದಾರೆ.jk-logo-justkannada-mysore

ಮೈಸೂರಿನ ಬಿ.ಎಂ.ಶ್ರೀ ನಗರದ ಶ್ರೀಧರ್, ಗೋವಿಂದರಾಜು ಬಂಧಿತರಾಗಿದ್ದಾರೆ. ರಸ್ತೆ ಬದಿ ನಿಂತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಆಟೋ ಹತ್ತಿಸಿ ಕೊಲೆಮಾಡಿದ್ದರು.

ಆಟೋ ಹತ್ತಿಸಿ ಕೊಲೆ ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ಫುಟೇಜ್ ಆದರಿಸಿ ಎನ್.ಆರ್ ಠಾಣೆಯ ಇನ್ ಸ್ಪೆಕ್ಟರ್ ಅಜರುದ್ದೀನ್ ಮತ್ತು ತಂಡದಿಂದ ಆರೋಪಿಗಳ ಬಂಧಿಸಲಾಗಿದೆ.

ಬಂಧಿತರ ವಿಚಾರಣೆ ಸಂದರ್ಭ ಕುಡಿದ ಮತ್ತಿನಲ್ಲಿ ಹಣಕಾಸಿನ ವಿಚಾರವಾಗಿ ಚಾಲಕನಾದ ಮಲ್ಲಿಕಾರ್ಜುನನೊಂದಿಗೆ ಆತನ ಸ್ನೇಹಿತ ಶ್ರೀಧರ್ ಜಗಳವಾಡಿದ್ದರು. ಈ ದ್ವೇಷದಿಂದ ಶ್ರೀಧರ್ ಮತ್ತೋರ್ವ ಸ್ನೇಹಿತ ಗೋವಿಂದರಾಜು ಕರೆಸಿ ಮಲ್ಲಿಕಾರ್ಜುನನ್ನ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.Auto,drains,man killed,two,accused,Andar

ಪ್ರಕರಣ ದಾಖಲಿಸಿಕೊಂಡಿರುವ ಎನ್.ಆರ್ ಪೊಲೀಸರು ಬಂಧಿತರನ್ನ ವಿಚಾರಣೆಗೊಳಪಡಿಸಿದ್ದಾರೆ.

key words : Auto-drains-man killed-two-accused-Andar