Thursday, September 17, 2026

BDA Apartments

Home Front Page ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ  ಖಡಕ್ ವಾರ್ನಿಂಗ್ ಕೊಟ್ಟ ಸಚಿವ ಎಸ್.ಟಿ ಸೋಮಶೇಖರ್…

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ  ಖಡಕ್ ವಾರ್ನಿಂಗ್ ಕೊಟ್ಟ ಸಚಿವ ಎಸ್.ಟಿ ಸೋಮಶೇಖರ್…

ಮೈಸೂರು,ಜನವರಿ,9,2021(www.justkannada.in):  ಇದು ಕಮೀಷನ್ ಸರಕಾರ ಎಂದು ಟೀಕಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ  ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.jk-logo-justkannada-mysore

ನಾನು ಅದೇ  ಸರ್ಕಾರದಲ್ಲಿ ಇದ್ದವನು. ನಮಗೂ ಎಲ್ಲವೂ ಗೊತ್ತಿದೆ. ನಾವು ಕೂಡ ಎಲ್ಲವನ್ನು ಹೇಳಬೇಕಾಗುತ್ತದೆ. ಸುಮ್ಮನೆ ಇದ್ದರೇ ಚಂದ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ್  ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ನೀವು ಎಷ್ಟು ಕಮೀಷನ್ ತಗೋಳ್ಳತ್ತಿದ್ದೀರಿ ಎಂಬುದು ನನಗೆ ಗೊತ್ತಿದೆ. ಅದನ್ನು ನಾನು ಡಿಟೈಲ್ ಆಗಿ ಹೇಳಬೇಕಾಗುತ್ತೆ. ಈಗ ಅದೆಲ್ಲಾ ಬೇಡ. ನಾನು ಸರಕಾರದ ಭಾಗವಾಗಿದ್ದೆ ಎಂಬುದನ್ನು  ಮರೆಯಬೇಡಿ ಎಂದು ಟಾಂಗ್ ನೀಡಿದರು.

ಡಿಕೆ ಶಿವಕುಮಾರ್ ಸುಮ್ನೆ ಇದ್ರೆ ಚೆನ್ನಾ. ಕಮೀಷನ್ ಸರಕಾರ ಎನ್ನುವುದು ಶೋಭೆ ತರುವ ಮಾತಲ್ಲ. ವಿರೋಧ ಪಕ್ಷದವರು ಇಷ್ಟು ದಿನ ಮಲಗಿದ್ರು ಈಗ ಏನೋ ಮಾಡೋದಿಕ್ಕೆ ಹೊರಟ್ಟಿದ್ದಾರೆ ಎಂದು ಸಚಿವ  ಎಸ್.ಟಿ ಸೋಮಶೇಖರ್ ಕಿಡಿಕಾರಿದರು.minister- ST Somashekhar-Khadak Warning -KPCC President- DK Sivakumar.

ನಮ್ಮ ಶಾಸಕರನ್ನು ಬಿಜೆಪಿ ಖರೀದಿಸಿತು ಎಂಬ ಸಿದ್ದರಾಮಯ್ಯ ಹೇಳಿಕೆಗೂ ತಿರುಗೇಟು ನೀಡಿದ ಸಚಿವ ಎಸ್.ಟಿ. ಸೋಮಶೇಖರ್, ನಮ್ಮನ್ನು ಯಾರಿಂದಲೂ ಖರೀದಿ ಮಾಡೋಕೆ ಸಾಧ್ಯವಿಲ್ಲ. ಚಲುವರಾಯಸ್ವಾಮಿ ಟೀಂ ಕಾಂಗ್ರೆಸ್ ಗೆ ಬಂದಾಗ ಅವರನ್ನೆಲ್ಲಾ ಬಾಂಬೆಯಲ್ಲಿ ಇಟ್ಟಿದ್ದು ನಾಮು. ಅವತ್ತಿನ ಬಾಂಬೆಯ ಡಿಟೆಲ್ಸ್ ಜಾಸ್ತಿ ಹೇಳುವ ಶಕ್ತಿ ನನಗೂ ಇದೆ. ಅವರು ನಮ್ಮ ಬಗ್ಗೆ ಹೆಚ್ಚು ಹೇಳಿದ್ರೆ ನಾನು ಹಳೆಯದೆಲ್ಲಾ ಹೇಳಬೇಕಾಗುತ್ತೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣ ಪಕ್ಷ ಬಿಟ್ಟೆವು. ಸಿದ್ದರಾಮಯ್ಯ ಈ ವಿಚಾರದಲ್ಲಿ ಆರೋಪ ಮಾಡಬಾರದು. ನಾವ್ಯಾರು ಖರೀದಿ ವಸ್ತುಗಳಲ್ಲ ಎಂದು ಸಿದ್ಧರಾಮಯ್ಯ ವಿರುದ್ಧ ಎಸ್ ಟಿ ಸೋಮಶೇಖರ್ ಹರಿಹಾಯ್ದರು.

Key words:minister- ST Somashekhar-Khadak Warning -KPCC President- DK Sivakumar.