Tuesday, August 4, 2026

BDA Apartments

Home Cinema ವಂಚಕ ಯುವರಾಜ್ ಜತೆ ಹಣಕಾಸು ವ್ಯವಹಾರ ಆರೋಪ: ತುರ್ತು ಸುದ್ಧಿಗೋಷ್ಠಿ ಕರೆದ ನಟಿ ರಾಧಿಕಾ ಕುಮಾರಸ್ವಾಮಿ…

ವಂಚಕ ಯುವರಾಜ್ ಜತೆ ಹಣಕಾಸು ವ್ಯವಹಾರ ಆರೋಪ: ತುರ್ತು ಸುದ್ಧಿಗೋಷ್ಠಿ ಕರೆದ ನಟಿ ರಾಧಿಕಾ ಕುಮಾರಸ್ವಾಮಿ…

ಬೆಂಗಳೂರು,ಜನವರಿ,21,2021(www.justkannada.in): ವಂಚಕ ಯುವರಾಜ್ ಜತೆ ಹಣಕಾಸಿನ ವ್ಯವಹಾರ ಆರೋಪ ಕೇಳಿ ಬಂದ ಹಿನ್ನೆಲೆ ನಟಿ ರಾಧಿಕಾ ಕುಮಾರಸ್ವಾಮಿ ಮಧ್ಯಾಹ್ನ ತುರ್ತು ಸುದ್ಧಿಗೋಷ್ಠಿ ಕರೆದಿದ್ದಾರೆ ಎನ್ನಲಾಗಿದೆ.jk-logo-justkannada-mysore

ನಟಿ ರಾಧಿಕಾ ಕುಮಾರಸ್ವಾಮಿ ಅವರ ಅಕೌಂಟ್ ಗೆ ವಂಚಕ ಯುವರಾಜ್ ಖಾತೆಯಿಂದ ಹಣ ವರ್ಗಾವಣೆ ಆಗಿರುವ ಬಗ್ಗೆ  ಪತ್ತೆ ಹಚ್ಚಲಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ವಂಚಕ ಯುವರಾಜ್ ಜೊತೆಗೆ ಹಣಕಾಸು ವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ನಟಿ ರಾಧಿಕಾ ಸ್ಪಷ್ಟನೆ ನೀಡಲು  ಇಂದು ಮಧ್ಯಾಹ್ನ 2.30ಕ್ಕೆ ಸುದ್ಧಿಗೋಷ್ಠಿ ಕರೆದಿದ್ದಾರೆ ಎನ್ನಲಾಗುತ್ತಿದೆ.

 ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಯುವರಾಜ್  ಬಂಧಿತನಾಗಿದ್ದು, ಹಲವು ಮಾಹಿತಿಯನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಮಧ್ಯೆ  ನಟಿ ರಾಧಿಕಾ ಜೊತೆಗೆ  ವಂಚಕ ಯುವರಾಜ್, ಅವರ ಬ್ಯಾಂಕ್ ಖಾತೆಯಿಂದ ಹಣಕಾಸಿನ ವ್ಯವಹಾರ ನಡೆಸಿರುವುದಾಗಿಯು ಆರೋಪ ಕೇಳಿ ಬಂದಿದೆ.

Key words: Financing deal –fraudster-Yuvraj-Actress -Radhika Kumaraswamy – press meet