Wednesday, August 12, 2026

BDA Apartments

Home Front Page ಇಂದು ಸಂಜೆ ವೇಳೆಗೆ ಹೊಸ ವರ್ಷಾಚರಣೆಗೆ ಗೈಡ್ ಲೈನ್ಸ್ ಬಿಡುಗಡೆ- ಸಚಿವ ಸುಧಾಕರ್…

ಇಂದು ಸಂಜೆ ವೇಳೆಗೆ ಹೊಸ ವರ್ಷಾಚರಣೆಗೆ ಗೈಡ್ ಲೈನ್ಸ್ ಬಿಡುಗಡೆ- ಸಚಿವ ಸುಧಾಕರ್…

ಬೆಂಗಳೂರು,ಡಿಸೆಂಬರ್,28,2020(www.justkannada.in):  ಈ ಬಾರಿ ಹೊಸ ವರ್ಷವನ್ನು ಸರಳವಾಗಿ, ಅರ್ಥಗರ್ಭಿತವಾಗಿ ಆಚರಿಸಬೇಕು. ಇಂದು ಸಂಜೆ ವೇಳೆಗೆ ಹೊಸ ವರ್ಷಾಚರಣೆಗೆ ಗೈಡ್ ಲೈನ್ಸ್ ಬಿಡುಗಡೆ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಸಚಿವ ಸುಧಾಕರ್, ಹೊಸ ವರ್ಷಾಚರಣೆಗೆ ಗೈಡ್ ಲೈನ್ಸ್  ಬಗ್ಗೆ ವಿಸ್ತೃತ ಚರ್ಚೆ ಮಾಡಿದ್ದೇವೆ. ಗೃಹ ಇಲಾಖೆಯಿಂದ ಸಂಜೆ ಸಂಪೂರ್ಣ ಮಾರ್ಗಸೂಚಿ ಬಿಡುಗಡೆ ಆಗಲಿದೆ. ಬೆಂಗಳೂರಿನಲ್ಲಿ ಹೇಗೆ ವರ್ಷಾಚರಣೆ ಮಾಡಬೇಕು. ಬೇರೆ ಜಿಲ್ಲೆಗಳಲ್ಲಿ ಹೇಗೆ ವರ್ಷಾಚರಣೆ ಇರಬೇಕು ಎಂಬುದರ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುತ್ತದೆ ಎಂದು ಹೇಳಿದರು.guide-lines-new-years-eve-release-this-evening-minister-sudhakar

 ಬ್ರಿಟನ್ ನಿಂದ ‌ಬಂದವರನ್ನು ಎರಡು ದಿನ‌ದೊಳಗೆ ಪತ್ತೆ ಹಚ್ಚಲಾಗುತ್ತದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ. ಯು.ಕೆಯಿಂದ ಬಂದವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಗೃಹ ಸಚಿವರ ಜೊತೆ ಚರ್ಚೆ ನಡೆಸಿದ್ದೇವೆ. ಎರಡು ದಿನಗಳೊಳಗೆ ಅವರನ್ನು ಪತ್ತೆ ಹಚ್ಚಲಾಗುತ್ತದೆ  ಎಂದು ಸಚಿವ ಸುಧಾಕರ್ ತಿಳಿಸಿದರು.

Key words: Guide Lines -New Year’s Eve- release- this evening-  Minister Sudhakar.