Sunday, August 16, 2026

BDA Apartments

Home Crime ಅಕ್ರಮ ಸಂಬಂಧ: ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಪತಿ ಕೊಲೆ

ಅಕ್ರಮ ಸಂಬಂಧ: ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಪತಿ ಕೊಲೆ

ಮೈಸೂರು,ಡಿಸೆಂಬರ್,17,2020(www.justkannada.in) : ಜಿಲ್ಲೆಯ ಸರಗೂರು ತಾಲ್ಲೂಕಿನ ಅಡ್ಡಹಳ್ಳಿ ಗ್ರಾಮದಲ್ಲಿ ಅಕ್ರಮ ಸಂಬಂಧದ ಕಾರಣ ಪತ್ನಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆಮಾಡಿರುವ ಘಟನೆ ನಡೆದಿದೆ.Teachers,solve,problems,Government,bound,Minister,R.Ashok

ಈ ಕುರಿತು ತನಿಖೆ ನಡೆಸಿದ ನಂಜನಗೂಡು ಪೊಲೀಸರು ಕೊಲೆಯ ಹಿಂದಿನ ರಹಸ್ಯವನ್ನು ಪತ್ತೆ ಹಚ್ಚಿದ್ದು, ಪತ್ನಿ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸರಗೂರು ತಾಲ್ಲೂಕಿನ ಅಡ್ಡಹಳ್ಳಿ ಗ್ರಾಮದ ಶಿವರಾಜು (39) ಕೊಲೆಯಾದವರು. ಕೊಲೆ ಆರೋಪದ ಮೇಲೆ ಪತ್ನಿ ಸೌಮ್ಯಾ (31), ಪ್ರಿಯಕರ ಯೋಗೀಶ್, ಆತನ ಸ್ನೇಹಿತ ಚೆಲುವನನ್ನು ಪೊಲೀಸರು ಬಂಧಿಸಿದ್ದಾರೆ.

5 ದಿನಗಳ ಹಿಂದೆ ಶಿವರಾಜು ಅವರ ಶವ ತಾಲ್ಲೂಕಿನ ಕಪ್ಪಸೋಗೆ ಗ್ರಾಮದ ನಾಲೆಯೊಂದರಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಶವವೆಂದು ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಪತ್ತೆಹಚ್ಚುವ ಸಲುವಾಗಿ ಸಿಪಿಐ ಲಕ್ಷ್ಮಿಕಾಂತ ತಳವಾರ್, ದೇವರಾಜು, ಸತೀಶ್, ಗುರು, ನವೀನ್, ಮಹೇಶ್, ಕಾಂತಮ್ಮ ಸೇರಿ 6 ಮಂದಿಯ ತಂಡವನ್ನು ರಚಿಸಿದ್ದರು.

ಅಡ್ಡಹಳ್ಳಿ ಗ್ರಾಮದ ಶಿವರಾಜು, ಸೌಮ್ಯಾ ಅವರನ್ನು ಮದುವೆಯಾಗಿ 15 ವರ್ಷಗಳಾಗಿದ್ದು, ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಶುಂಠಿ ತೋಟದ ಕೆಲಸಕ್ಕೆಂದು ಆಟೋದಲ್ಲಿ ಹೋಗುತ್ತಿದ್ದ ಸೌಮ್ಯಾ ಚಿಕ್ಕೋಡು ಗ್ರಾಮದ ಆಟೊ ಚಾಲಕ ಯೋಗೀಶ್ ನಡುವೆ ಸ್ನೇಹ ಬೆಳೆದು ಅಕ್ರಮ ಸಂಬಂಧವೂ ಇತ್ತು ಎಂದು ತಿಳಿದು ಬಂದಿದೆ.

Illicit-relationship-lover-Husband-murdered-wife

ಈ ವಿಷಯ ತಿಳಿದ ಶಿವರಾಜು ಪತ್ನಿಯೊಂದಿಗೆ ಜಗಳ ತೆಗೆಯುತ್ತಿದ್ದ ಎನ್ನಲಾಗಿದೆ. ಗಲಾಟೆ ವಿಷಯವನ್ನು ಪ್ರಿಯಕರ ಯೋಗೀಶ್‍ನಿಗೆ ತಿಳಿಸಿದಾಗ ಆತನ ಸ್ನೇಹಿತ ಚೆಲುವನ ಜೊತೆ ಸೇರಿ ಮೂವರು ಸೇರಿ ಶಿವರಾಜುವನ್ನು ಕೊಲೆ ಮಾಡಿ ನಾಲೆಗೆ ಎಸೆದಿರುವುದು ಬೆಳಕಿಗೆ ಬಂದಿದೆ.

key words : Illicit-relationship-lover-Husband-murdered-wife