Sunday, August 30, 2026

BDA Apartments

Home Front Page ಸಿದ್ದಲಿಂಗಪುರ ಗ್ರಾಮ ಸುಭ್ರಮಣ್ಯೇಶ್ವರ ಸ್ವಾಮಿ ದೇವಾಲಯ : ಸಾರ್ವಜನಿಕರಿಗೆ ನಿರ್ಬಂಧ

ಸಿದ್ದಲಿಂಗಪುರ ಗ್ರಾಮ ಸುಭ್ರಮಣ್ಯೇಶ್ವರ ಸ್ವಾಮಿ ದೇವಾಲಯ : ಸಾರ್ವಜನಿಕರಿಗೆ ನಿರ್ಬಂಧ

ಮೈಸೂರು,ಡಿಸೆಂಬರ್,06,2020(www.justkannada.in) : ಮೈಸೂರು ತಾಲೂಕಿನ ಕಸಬಾ ಹೋಬಳಿ ಸಿದ್ದಲಿಂಗಪುರ ಗ್ರಾಮದ ಸುಭ್ರಮಣ್ಯೇಶ್ವರ ಸ್ವಾಮಿ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

logo-justkannada-mysore

ಕೊರೊನಾ ಹಿನ್ನೆಲೆ ಡಿ.20ರಂದು ನಡೆಯಲಿರುವ ಸಿದ್ದಲಿಂಗಪುರ ಗ್ರಾಮದ ಸುಭ್ರಮಣ್ಯೇಶ್ವರ ಸ್ವಾಮಿ ಷಷ್ಠಿ ಜಾತ್ರಾ ಮಹೋತ್ಸವ ಅದ್ದೂರಿ ಆಚರಣೆ ಕಡಿವಾಣ ಹಾಕುವ ಉದ್ದೇಶದಿಂದ ಹಾಗೂ ಸರಳ, ಸಾಂಪ್ರದಾಯಿಕ ಆಚರಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ದೇವಾಲಯಕ್ಕೆ ಸಾರ್ವಜನಿಕ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.

ಧಾರ್ಮಿಕ ವಿಧಾನದಂತೆ. ಸುಬ್ರಹ್ಮಣ್ಯ ಸಷ್ಠಿ ಜಾತ್ರೆ ಸರಳ ಆಚರಣೆ. ಕೋವಿಡ್ ಮಾರ್ಗಸೂಚಿ ಪಾಲಿಸಿ ದೇವಸ್ಥಾನದ ಆಡಳತ ಮಂಡಳಿಯಿಂದ ಸರಳ ಆಚರಣೆಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

 Siddhalingapuram,village,Subramanyeswara,Swamy,Temple,restriction,public

key words : Siddhalingapuram-village-Subramanyeswara- Swamy-Temple-restriction-public