ಬೆಂಗಳೂರು,ನವೆಂಬರ್,30,2020(www.justkannada.in): ಇಂದು ಬೆಳಗ್ಗೆ 11.30 ಕ್ಕೆ ರಾಜ್ಯ ಚುನಾವಣಾ ಆಯೋಗದಿಂದ ಸುದ್ದಿಗೋಷ್ಠಿ ನಡೆಸಲಿದ್ದು, ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಇಂದೇ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. 
ಹೈಕೋರ್ಟ್ ಚುನಾವಣೆ ನಡೆಸುವ ಬಗ್ಗೆ ನಿರ್ದೇಶನ ನೀಡಿದ್ದು, ಕೊರೋನಾ ಮಾರ್ಗಸೂಚಿಗಳೊಂದಿಗೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಆಯೋಗದಿಂದ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇಂದು 11.30ಕ್ಕೆ ರಾಜ್ಯ ಚುನಾವಣಾ ಆಯೋಗ ಸುದ್ಧಿಗೋಷ್ಠಿ ನಡೆಸಲಿದ್ದು, ಈ ವೇಳೆ ಗ್ರಾಪಂ ಗೆ ಮೂಹೂರ್ತ ಫಿಕ್ಸ್ ಆಗಲಿದೆ ಎನ್ನಲಾಗಿದೆ. ಇನ್ನು 3 -4 ಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಆರಂಭದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಆಸಕ್ತಿ ತೋರದ ರಾಜಕೀಯ ಪಕ್ಷಗಳು ನಂತರದಲ್ಲಿ ಪಂಚಾಯತಿ ಚುನಾವಣೆಗೆ ಅಗತ್ಯ ತಯಾರಿ ಕೈಗೊಂಡಿವೆ.
Key words: Possibility – fix date – gram panchayat -elections






