Wednesday, August 12, 2026

BDA Apartments

Home Front Page ಮರಾಠ ಪ್ರಾಧಿಕಾರದ ಆದೇಶ ಹಿಂಪಡೆಯುವಂತೆ ಆಗ್ರಹ: ನಾಳೆ ಮೈಸೂರಿನಲ್ಲಿ ‘ರಾಷ್ಟ್ರೀಯ ಹೆದ್ಧಾರಿ ಬಂದ್’ ಮಾಡಿ ಪ್ರತಿಭಟನೆ…

ಮರಾಠ ಪ್ರಾಧಿಕಾರದ ಆದೇಶ ಹಿಂಪಡೆಯುವಂತೆ ಆಗ್ರಹ: ನಾಳೆ ಮೈಸೂರಿನಲ್ಲಿ ‘ರಾಷ್ಟ್ರೀಯ ಹೆದ್ಧಾರಿ ಬಂದ್’ ಮಾಡಿ ಪ್ರತಿಭಟನೆ…

ಮೈಸೂರು,ನವೆಂಬರ್,28,2020(www.justkannada.in) ರಾಜ್ಯ ಸರ್ಕಾರ ರಚನೆ ಮಾಡಿರುವ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನ ವಿರೋಧಿಸಿ ನಾಳೆ ಮೈಸೂರಿನಲ್ಲಿ ಕನ್ನಡ ಒಕ್ಕೂಟದ ವತಿಯಿಂದ ರಾಷ್ಟ್ರೀಯ ಹೆದ್ಧಾರಿ ಬಂದ್ ಮಾಡಿ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ.I didn't knew CM BSY will think so cheaply - KPCC President D.K. Shivakumar

ಕನ್ನಡ ಒಕ್ಕೂಟದ ಅಧ್ಯಕ್ಷರಾದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಾಳೆ ಮಧ್ಯಾಹ್ನ 12.30ಕ್ಕೆ ನಗರದ ಮೈಸೂರು-ಬೆಂಗಳೂರು ರಸ್ತೆ ಬಳಿ ಇರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಸಿಗ್ನಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡುವ ಮೂಲಕ ಮರಾಠ ಅಭಿವೃದ್ಧಿ ಪ್ರಾಧಿಕಾರ ಆದೇಶ ಹಿಂಪಡೆಯುವಂತೆ ಸರ್ಕಾರಕ್ಕೆ ಆಗ್ರಹಿಸಲಿದ್ದಾರೆ.revoke-maratha-authoritys-order-kannada-okkuta-vatal-nagaraj-mysore-protests-tomorrow

ಈ ವೇಳೆ ಕನ್ನಡ ಒಕ್ಕೂಟದ ಮುಖಂಡರುಗಳಾದ ಸಾ.ರಾ ಗೋವಿಂದು, ಕನ್ನಡ ಸೇನೆಯ ರಾಜ್ಯಾಧ್ಯಕ್ಷ  ಕೆ.ಆರ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರುಗಳಾದ ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಮಂಜುನಾಥ್ ದೇವ್, ಕನ್ನಡಪರ ಹೋರಾಟಗಾರ ಹೆಚ್.ಗಿರೀಶ್ ಗೌಡ ಪಾಲ್ಗೊಳ್ಳಲಿದ್ದಾರೆ.

Key words: Revoke- Maratha authority’s –order- kannada okkuta- vatal nagaraj-Mysore -protests -tomorrow