ಯೋಗ ದಿನಾಚಾರಣೆಗೆ ಮೈಸೂರು ಜಿಲ್ಲಾಡಳಿತ ಸಂಪೂರ್ಣ ಸಜ್ಜು- ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್…

ಮೈಸೂರು,ಜೂ,19,2019(www.justkannada.in): ಜೂನ್ 21 ರಂದು ವಿಶ್ವ ಯೋಗ ದಿನಾಚರಣೆ ಹಿನ್ನಲೆ, mYsUru ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದ್ದು, ಈ ಭಾರಿ ದಾಖಲೆಗಾಗಿ ಯೋಗ ಮಾಡುತ್ತಿಲ್ಲ. ಈ ಯೋಗ ದಿನಾಚರಣೆ ಯನ್ನು ಹಬ್ಬವಾಗಿ ಅಚರಣೆ ಮಾಡುತ್ತಿದ್ದೇವೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್  ಮಾಹಿತಿ ನೀಡಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ವಿಶ್ವಯೋಗ ದಿನಾಚಾರಣೆ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಡಿಸಿ ಅಭಿರಾಂ ಜೀ ಶಂಕರ್, ಈ ಭಾರಿ 1 ಲಕ್ಷ ಜನ ಸೇರಿಸುವ ಯೋಜನೆ ಇದೆ. ಮೈಸೂರಿನ ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದು, ಮೈಸೂರು ನಗರದಿಂದ ರೇಸ್ ಕೋರ್ಸ್ ಗೆ ಸಾರಿಗೆ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ.ಮುಂಜಾನೆ 4 ರಿಂದಲೇ ಸಾರಿಗೆ ವ್ಯವಸ್ಥೆ ಇರುತ್ತದೆ. ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮ ಮಾಡಲು ಈ ಭಾರಿ ಮುಂದಾಗಿದ್ದೇವೆ. ಈ ಭಾರಿ ಸರ್ವ ಧರ್ಮದ ಗುರುಗಳು ಕೂಡ ಭಾಗವಹಿಸಲಿದ್ದಾರೆ ಎಂದರು.

ಇನ್ನು ನಾಳೆ  6 ಗಂಟೆಗೆ ಎಲ್ಲರೂ ಹಾಜರಾಗಬೇಕು. ಏಳು ಗಂಟೆಗೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭವಾಗಲಿದೆ.ಇಂದು ಕೂಡ ಅಧಿಕಾರಿಗಳು ಮತ್ತು ಯೋಗ ಕೇಂದ್ರದ ಮುಖ್ಯಸ್ಥರ ಸಭೆ ಮಾಡಲಾಗಿದ್ದು, ಸುಮಾರು ಒಂದು ಲಕ್ಷದವರೆಗೆ ಯೋಗಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲಾ ಇಲಾಖೆ ಅಧಿಕಾರಿಗಳೂ ಕೂಡ ಭಾಗವಹಿಸುವಂತೆ ತಿಳಿಸಲಾಗಿದೆ. ನಗರ ಬಸ್ ನಿಲ್ದಾಣ ಮತ್ತು ಪ್ರಮುಖ ವೃತ್ತಗಳಿಂದ  150ಕ್ಕೂ ಹೆಚ್ಚು  ಬಸ್ ಸೌಲಭ್ಯ ಮಾಡಲಾಗಿದೆ. ಪ್ಲಾಸ್ಟಿಕ್ ಮುಕ್ತ ಮಾಡೊ ದೃಷ್ಟಿಯಿಂದ ಕೆಲ ಕಡೆಗಳಲ್ಲಿ ನಗರ ಪಾಲಿಕೆಯಿಂದ ಕುಡಿಯೊ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

12 ಕೆಡಗಳಲ್ಲಿ 156 ಶೌಚಾಲಯ ವ್ಯವಸ್ಥೆ. 25 ಸ್ಥಳಗಲ್ಲಿ ಕುಡಿಯೊ ನೀರಿನ ಘಟಕಗಳು. ಮುಂಜಾಗ್ರತಾ ಕ್ರಮವಾಗಿ ವಿಶೇಷ ಆಂಬುಲೆನ್ಸ್ ವ್ಯವಸ್ಥೆ, ವಾಹನ ನಿಲುಗಡೆಗೆ 12 ಕಡೆಗಳಲ್ಲಿ ಪಾರ್ಕಿಂಗ್  ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಭದ್ರತೆ ದೃಷ್ಟಿಯಿಂದ 650 ಜನ ಪೋಲಿಸರ ನಿಯೋಜನೆ ಮಾಡಲಾಗಿದ್ದು  ನಾಲ್ಕು ಬಾಂಬ್ ಸ್ಕ್ವಾಡ್, ಹಾಗೂ ಕೆಎಸ್ ಆರ್ ಪಿ   ತುಕಡಿ, ಪ್ರವೇಶ ದ್ವಾರಗಳಲ್ಲಿ ಮೆಟೆಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಭಿರಾಮ್ ಜಿ ಶಂಕರ್ ಮಾಹಿತಿ ನೀಡಿದರು.

Key words: Mysore District – complete- outfit -Yoga Day-Abhiram G. Shankar-information -preparation.