Friday, August 28, 2026

BDA Apartments

Home Cinema ಬೆಳ್ಳಿ ಪರದೆ ಮೇಲೆ ಬರಲು ಮಾಸ್ತಿ ವೆಂಕಟೇಶ ಅಯ್ಯಂಗಾರ್’ರ ‘ಮೂಕನ ಮಕ್ಕಳು’ ತಯಾರಿ!

ಬೆಳ್ಳಿ ಪರದೆ ಮೇಲೆ ಬರಲು ಮಾಸ್ತಿ ವೆಂಕಟೇಶ ಅಯ್ಯಂಗಾರ್’ರ ‘ಮೂಕನ ಮಕ್ಕಳು’ ತಯಾರಿ!

ಬೆಂಗಳೂರು, 17 ನವೆಂಬರ್ 2020: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ‘ಮೂಕನ ಮಕ್ಕಳು’ ಕೃತಿ ಬೆಳ್ಳಿ ಪರದೆ ಮೇಲೆ ಬರುತ್ತಿದೆ.

ಹೌದು. ‘ಮೂಕನ ಮಕ್ಕಳು’ ಸಿನಿಮಾ ರೂಪತಾಳಿ ಬೆಳ್ಳಿತೆರೆ ಮೇಲೆ ಬರಲು ಸಿದ್ಧವಾಗಿದೆ. ರಂಗಭೂಮಿಯಲ್ಲಿ ಸಕ್ರೀಯರಾಗಿರುವ ಮೈಸೂರು ಮಂಜು ಸಿನಿಮಾವನ್ನು ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ.

ಚಿತ್ರದಲ್ಲಿ ನವ ನಟ ಮಂಜುಕ್ರಿಷ್ ಮೊದಲ ಬಾರಿಗೆ ಬಣ್ಣಹಚ್ಚಿದ್ದಾರೆ. ಈಗಾಗಲೇ ಕೋಲ್ಕತ್ತಾ ಫಿಲ್ಮ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡು ಉತ್ತಮ ಪರಿಸರ ಚಿತ್ರ ಮತ್ತು ಉತ್ತಮ ಸಹ ನಟ ಪ್ರಶಸ್ತಿ ಪಡೆದುಕೊಂಡಿದೆ.

ಇನ್ನು ಯು ಕೆಯಲ್ಲಿ ಎರಡು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆಯಾಗಿದೆ. ಪನೋರಮಾ ಸೇರಿದಂತೆ ವಿವಿಧ ಚಿತ್ರೋತ್ಸವಗಳಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ.
ಈಗಾಗಲೇ ಅನೇಕರಿಂದ ಮೆಚ್ಚುಗೆಗೆ ಪಾತ್ರವಾಗಿರುವ ಮೂಕನ ಮಕ್ಕಳು ಸಿನಿಮಾ ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.