Friday, August 28, 2026

BDA Apartments

Home Front Page ಯಾರೇ ತಪ್ಪು ಮಾಡಿದ್ರೂ ಶಿಕ್ಷೆಯಾಗಲೇಬೇಕು- ಸಂಪತ್ ರಾಜ್ ಬಂಧನ ಕುರಿತು ಅಖಂಡ ಶ್ರೀನಿವಾಸಮೂರ್ತಿ ಹೇಳಿಕೆ…

ಯಾರೇ ತಪ್ಪು ಮಾಡಿದ್ರೂ ಶಿಕ್ಷೆಯಾಗಲೇಬೇಕು- ಸಂಪತ್ ರಾಜ್ ಬಂಧನ ಕುರಿತು ಅಖಂಡ ಶ್ರೀನಿವಾಸಮೂರ್ತಿ ಹೇಳಿಕೆ…

ಬೆಂಗಳೂರು,ನವೆಂಬರ್,17,2020(www.justkannada.in): ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂಪತ್ ರಾಜ್ ಬಂಧನವಾಗಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಲೇಬೇಕು ಎಂದಿದ್ದಾರೆ.kannada-journalist-media-fourth-estate-under-loss

ಮಾಧ್ಯಗಳ ಜತೆ ಇಂದು ಮಾತನಾಡಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಪೊಲೀಸರು, ನ್ಯಾಯಾಲಯ ಮಾಧ್ಯಮ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ನಿಮ್ಮ ಸಹಕಾರದಿಂದ ಸಂಪತ್ ರಾಜ್ ಬಂಧನವಾಗಿದೆ. ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಬೇಕು. ನನಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.dj-halli-kg-halli-riot-case-sampath-raj-arrest-mla-akanda-srinivasamoorthy

ನಾನು ಎಲ್ಲಿಯೂ ಯಾರ ವಿರುದ್ದವೂ ದ್ವೇಷದ ರಾಜಕಾರಣ ಮಾಡಿಲ್ಲ. ನನ್ನನ್ನೇ ಯಾಕೆ ಟಾರ್ಗೆಟ್ ಮಾಡಿದ್ದಾರೆ ಗೊತ್ತಿಲ್ಲ. ಸಂಪತ್ ರಾಜ್ ಮತ್ತು ನನ್ನ ನಡುವೆ ಯಾವುದೇ ವೈಮನಸ್ಸು ಇಲ್ಲ. ತಪ್ಪು ಮಾಡಿದ್ದಕ್ಕೆ ಓಡಿ ಹೋಗಿದ್ದಾರೆ. ತಪ್ಪು ಮಾಡಿಲ್ಲದಿದ್ದರೇ ಪೊಲೀಸರ ಮುಂದೆ ಹಾಜರಾಗಬೇಕಿತ್ತು. ಹೀಗಾಗಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಅಖಂಡ ಶ್ರೀನಿವಾಸ ಮೂರ್ತಿ ಆಗ್ರಹಿಸಿದರು.

Key words: dj halli-kg halli riot case- sampath raj- arrest- MLA-Akanda Srinivasamoorthy