Tuesday, August 11, 2026

BDA Apartments

Home Crime ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರ ಬಂಧನ..

ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರ ಬಂಧನ..

ಬೆಂಗಳೂರು,ನವೆಂಬರ್,7,2020(www.justkannada.in): ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ  10,05,200 ರೂಪಾಯಿ ಅನ್ನ ವಶಕ್ಕೆ ಪಡೆದಿದ್ದಾರೆ.

ಚಾಮರಾಜಪೇಟೆ ಮೂಲದ ಆಕಾಶ್ ಜೈನ್(29), ಮತ್ತು ಶಾಂತಿನಗರ ನಿವಾಸಿ  ನವೀನ್ ದಾನಿ (34) ಬಂಧಿತ ಆರೋಪಿಗಳು.jk-logo-justkannada-logo

ನಿನ್ನೆ  ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿ  ಕನ್ನಿಂಗ್  ಹ್ಯಾಂ ರಸ್ತೆ ಪೋರ್ಟಿಸ್ ಆಸ್ಪತ್ರೆ ಎದುರುಗಡೆ ಡಾಮಿನೋಸ್ ಮುಂಭಾಗದಲ್ಲಿ ಇಬ್ಬರು ಆರೋಪಿಗಳು  ಮುಂಬೈ ಇಂಡಿಯನ್ನ ಮತ್ತು ದೆಹಲಿ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಪಟ್ಟಂತೆ ಹಾಗೂ ನಿನ್ನೆ ನಡೆದ ಆರ್ ಸಿಬಿ ಮತ್ತು ಎಸ್ ಆರ್ ಎಚ್ ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಬೆಟ್ಟಿಂಗ್  ದಂಧೆಯಲ್ಲಿ ತೊಡಗಿದ್ದರು.arrest-two-cricket-betting-racket-bangalore

ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಬಂಧಿತರಿಂದ 10,05,200 ರೂಪಾಯಿ ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Arrest – two -cricket betting- racket-bangalore