Sunday, September 20, 2026

BDA Apartments

ಜನ ಚುನಾವಣೆ ದಿನ ಉತ್ತರ ಕೊಡುತ್ತಾರೆ : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ BDA JK_Adv B...
Home Front Page ಜನ ಚುನಾವಣೆ ದಿನ ಉತ್ತರ ಕೊಡುತ್ತಾರೆ : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ 

ಜನ ಚುನಾವಣೆ ದಿನ ಉತ್ತರ ಕೊಡುತ್ತಾರೆ : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ 

ಬೆಂಗಳೂರು,ಅಕ್ಟೋಬರ್,31,2020(www.justkannada.in) : ಜೆಡಿಎಸ್ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೇಳುತ್ತಾರೆ ಇದಕ್ಕೆ ಜನ ಚುನಾವಣೆ ದಿನ ಉತ್ತರ ಕೊಡುತ್ತಾರೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಎಂದು ಹೇಳಿದರು.jk-logo-justkannada-logoಪ್ರಧಾನಿ ಮೋದಿ ನನ್ನ ಪ್ರಾಜೆಕ್ಟ್ ಹೈಜಾಕ್ ಮಾಡಿದ್ದಾರೆ

ಬೆಂಗಳೂರಿನ ಪೀಣ್ಯದ ಕೈಗಾರಿಕೆ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಕೈಗಾರಿಕೆಗೆ ಒತ್ತು ನೀಡಿದ್ದೆ. ಕಾಂಪೀಟ್ ವಿತ್ ಚೀನಾ ಯೋಜನೆ ಜಾರಿ ಮಾಡಿದ್ದೆ. ಇದೀಗ ಪ್ರಧಾನಿ ಮೋದಿ ನನ್ನ ಪ್ರಾಜೆಕ್ಟ್ ಹೈಜಾಕ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

 

ಲೂಟಿ ಮಾಡಿದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ

ಲೂಟಿ ಹೊಡೆಯುವವರನ್ನ ಆಯ್ಕೆ ಮಾಡಬೇಡಿ. ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿಯ ಮಾತು ರಾಜ್ಯದಲ್ಲಿ ಪಾಲಿಸಬೇಕು. ಲೂಟಿ ಮಾಡಿದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ, ಕಳಪೆ ಕಾಮಗಾರಿಯಿಂದ ಹಣ ಮಾಡಿದ್ದಾರೆ ಎಂದರು.

ಈ ಸಂದರ್ಭ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣ ಮೂರ್ತಿ, ಮಾಜಿ ಶಾಸಕ ಶರವಣ ಹಾಗೂ ಜೆಡಿಎಸ್ ನಗರ ಅಧ್ಯಕ್ಷ ಪ್ರಕಾಶ್ ಹಾಜರಿದ್ದರು.Former-CM H.D.Kumaraswamy-Election-Day

 

key words : Former-CM H.D.Kumaraswamy-Election-Day