Friday, August 21, 2026

BDA Apartments

Home Front Page ವಿಜಯೇಂದ್ರ ಅವರು ಕಾಲಿಟ್ಟಲ್ಲಿ ಗೆಲುವು ನಿಶ್ಚಿತ : ಸಚಿವ ಡಾ.ನಾರಾಯಣಗೌಡ

ವಿಜಯೇಂದ್ರ ಅವರು ಕಾಲಿಟ್ಟಲ್ಲಿ ಗೆಲುವು ನಿಶ್ಚಿತ : ಸಚಿವ ಡಾ.ನಾರಾಯಣಗೌಡ

ತುಮಕೂರು,ಅಕ್ಟೋಬರ್,30,2020(www.justkannada.in) : ಸಿಎಂ ಯಡಿಯೂರಪ್ಪ ಅವರು ಅಭಿವೃದ್ಧಿ ಮಾಡುವುದಾಗಿ ಮಾತುಕೊಟ್ಟರೆ ಎಂದಿಗೂ ಮಾತು ತಪ್ಪುವುದಿಲ್ಲ. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಲಿಟ್ಟಲ್ಲಿ ಗೆಲುವು ನಿಶ್ಚಿತ ಎಂದು ಪೌರಾಡಳಿತ, ತೋಟಗಾರಿಕೆ, ರೇಷ್ಮೆ ಸಚಿವ ಡಾ.ನಾರಾಯಣಗೌಡ ಹೇಳಿದರು.jk-logo-justkannada-logoಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಪರ ಮದಲೂರಿನಲ್ಲಿ ನಡೆದ ಸಮಾವೇಶದಲ್ಲಿ ಸಚಿವರು ಮಾತನಾಡಿ, ಸಿಎಂ ಯಡಿಯೂರಪ್ಪನವರು  ಶಿರಾಕ್ಷೇತ್ರವನ್ನು ಮೂರನೆ ಶಿಕಾರಿಪುರವನ್ನಾಗಿ ಮಾಡುತ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಶಿರಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರುವುದು ಖಚಿತ

ಶಿರಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರುವುದು ಖಚಿತ. ಮಂಡ್ಯ ಜಿಲ್ಲೆಯಲ್ಲಿ ಯಡಿಯೂರಪ್ಪ ಅವರ ಆಶೀರ್ವಾದಿಂದ ನನ್ನನ್ನು ಗೆಲ್ಲಿಸಿದ್ರು. ಮೂರು ಖಾತೆ ನೀಡಿ ಸಚಿವನನ್ನಾಗಿ ಮಾಡಿದ್ರು. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಲ್ಲ ಅಂತಿದ್ರು. ಆದ್ರೆ ಈಗ ಯಡಿಯೂರಪ್ಪ ಅವರ ಕನಸು ನೆರವೇರಿದೆ ಎಂದರು.

ಕೆ.ಆರ್.ಪೇಟೆಗೆ ಸಾವಿರ ಕೋಟಿ ಅನುದಾನ 

ಕೆ.ಆರ್.ಪೇಟೆಯಲ್ಲಿ ಗೆಲ್ಲಿಸಿದ್ರೆ ಎರಡನೆ ಶಿಕಾರಿಪುರ ಮಾಡ್ತಿನಿ ಅಂತ ಯಡಿಯೂರಪ್ಪ ಭರವಸೆ ಕೊಟ್ಟಿದ್ದರು.. ಅದರಂತೆ ಈಗ ಕ್ಷೇತ್ರಕ್ಕೆ ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆಗ್ತಿದೆ. ವಿಜಯೇಂದ್ರ ಅವರು ಕೆ.ಆರ್.ಪೇಟೆ ಚುನಾವಣೆ ನೇತೃತ್ವ ವಹಿಸಿದ್ರು. ಅವರು ಕೊಟ್ಟ ಮಾತಿನಂತೆ ಈಗ ಅಭಿವೃದ್ಧಿ ಕೆಲಸವಾಗುತ್ತಿದ್ದು, 150 ಹಾಸಿಗೆಯ ಹೈಟೆಕ್ ಆಸ್ಪತ್ರೆ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.

ಕ್ಷೇತ್ರವನ್ನು ಮೂರನೆ ಶಿಕಾರಿಪುರ ಮಾಡ್ತಾರೆ

ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಅವರನ್ನ ಗೆಲ್ಲಿಸಿಕೊಡಿ. ಕ್ಷೇತ್ರವನ್ನು ಮೂರನೆ ಶಿಕಾರಿಪುರ ಮಾಡ್ತಾರೆ. ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ತಾರೆ. ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ಹರಿದುಬರುತ್ತೆ. ಇದಕ್ಕೆ ಉದಾಹರಣೆ ಕೆ.ಆರ್.ಪೇಟೆ ಕ್ಷೇತ್ರ. ಅದೇ ರೀತಿ ಶಿರಾ ಕ್ಷೇತ್ರ ಕೂಡ ಅಭಿವೃದ್ಧಿ ಆಗಲಿದೆ ಎಂದು ಮನವಿ ಮಾಡಿದರು.Vijayendra-wins-walks-Minister-Dr.Narayana Gowda

key words : Vijayendra-wins-walks-Minister-Dr.Narayana Gowda