Friday, September 18, 2026

BDA Apartments

ಜಾತಿ ರಾಜಕಾರಣಕ್ಕೆ ಜನ ತಕ್ಕ ಉತ್ತರ ಕೊಡಬೇಕು- ಡಿ.ಕೆ ಶಿವಕುಮಾರ್ ಗೆ ಕೇಂದ್ರ ಸ...
Home Front Page ಜಾತಿ ರಾಜಕಾರಣಕ್ಕೆ ಜನ ತಕ್ಕ ಉತ್ತರ ಕೊಡಬೇಕು- ಡಿ.ಕೆ ಶಿವಕುಮಾರ್ ಗೆ ಕೇಂದ್ರ ಸಚಿವ ಡಿ.ವಿ...

ಜಾತಿ ರಾಜಕಾರಣಕ್ಕೆ ಜನ ತಕ್ಕ ಉತ್ತರ ಕೊಡಬೇಕು- ಡಿ.ಕೆ ಶಿವಕುಮಾರ್ ಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಟಾಂಗ್…

ಬೆಂಗಳೂರು,ಅಕ್ಟೋಬರ್,26,2020(www.justkannada.in):   ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜಾತಿ ಮೇಲೆ ಚುನಾವಣೆ ಮಾಡಲು ಹೊರಟಿದ್ದಾರೆ. ಜಾತಿ ರಾಜಕಾರಣಕ್ಕೆ ಜನ ಉತ್ತರ ಕೊಡಬೇಕು ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ತಿಳಿಸಿದರು.jk-logo-justkannada-logo

ರಾಜ್ಯದಲ್ಲಿ ಆರ್.ಆರ್ ನಗರ ಮತ್ತು ಶಿರಾ ಉಪಚುನಾವಣಾ ಕ್ಷೇತ್ರದ ಕಣ ರಂಗೇರಿದ್ದು ಈ ಸಂಬಂಧ ಇಂದು ಮಾಧ್ಯಮಗಳ ಜತೆ ಮಾತನಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರ ಹಾಕಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಡಿ.ಕೆ ಶಿವಕುಮಾರ್ ಜಾತಿ ಮೇಲೆ ರಾಜಕಾರಣ ಮಾಡಲು ಹೊರಟಿದ್ದಾರೆ. ನಾನು ಒಕ್ಕಲಿಗನಲ್ವಾ..? ಸೋಮಶೇಖರ್, ಡಿಸಿಎಂ ಅಶ್ವಥ್ ನಾರಾಯಣ್ ಒಕ್ಕಲಿಗನಲ್ವಾ..? ಎಂದು ಪ್ರಶ್ನಿಸಿದರು.caste-politics-kpcc-president-dk-sivakumar-union-minister-dv-sadananda-gowda

ಹಾಗೆಯೇ ಜಾತಿ ವಿಚಾರಕ್ಕೆ  ಹೆಚ್.ಡಿ ಕುಮಾರಸ್ವಾಮಿ ಮತ್ತು ಡಿ.ಕೆ ಶಿವಕುಮಾರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಹೆಚ್.ಡಿ ದೇವೇಗೌಡರ ಚಾಳಿ ಡಿ.ಕೆ ಶಿವಕುಮಾರ್ ಗೆ ಬಂದಿದೆ. ಈಗ ಡಿ.ಕೆ ಶಿವಕುಮಾರ್ ಜಾತಿ ಮೇಲೆ ಚುನಾವಣೆ ಮಾಡಲು ಮುಂದಾಗಿದ್ದು ಜನರು ಇದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಡಿ.ವಿ ಸದಾನಂದಗೌಡ ತಿಳಿಸಿದರು.

Key words: Caste -politics –kpcc president-DK Sivakumar-  Union Minister- DV Sadananda Gowda