Tuesday, August 25, 2026

BDA Apartments

Home Crime ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕರ ಕಿರುಕುಳಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆಗೆ ಶರಣು

ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕರ ಕಿರುಕುಳಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆಗೆ ಶರಣು

ಬೆಂಗಳೂರು:ಜೂ-15;(www.justkannada.in) ಪ್ರೀತಿಸುವಂತೆ ಹಿಂದೆ ಬಿದ್ದ ಇಬ್ಬರು ಯುವಕರ ಹಿಂಸೆ ತಾಳಲಾರದೇ ಮನನೊಂದ ಅಪ್ರಾಪ್ತ ಬಾಲಕಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

ಇಲ್ಲಿನ ಎಡೇಹಳ್ಳಿ ಗ್ರಾಮದ ಧನಲಕ್ಷ್ಮೀ (14) ಮೃತ ದುರ್ದೈವಿ. ಬಾಲಕಿಗೆ ಹಲವು ದಿನಗಳಿಂದ ಆರೋಪಿಗಳಾದ ಜಗದೀಶ್ ಹಾಗೂ ರವಿಕುಮಾರ್ ಪ್ರೀತಿಸುವಂತೆ ಕಾಟ ನೀಡುತ್ತಿದ್ದರು. ಯುವಕರ ಕಿರುಕುಳಕ್ಕೆ ಬೇಸತ್ತ ಬಾಲಕಿ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಧನಲಕ್ಷ್ಮಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾಳೆ. ಇದನ್ನು ಗಮನಿಸಿದ ಅಕ್ಕ-ಪಕ್ಕದ ನಿವಾಸಿಗಳು ಬೆಂಕಿ ಆರಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಯಿತಾದರೂ ಸಂಪೂರ್ಣ ಸುಟ್ಟಗಾಯಗಳಿಂದ ಧನಲಕ್ಷ್ಮಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾಬಸ್ ಪೇಟೆ ಪೊಲೀಸರು ಜಗದೀಶ್ ಹಾಗೂ ರವಿಕುಮಾರ್ ಎಂಬ ಇಬ್ಬರನ್ನೂ ಬಂಧಿಸಿದ್ದಾರೆ.

ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕರ ಹಿಂಸೆಗೆ ಬೇಸತ್ತ ಬಾಲಕಿ ಆತ್ಮಹತ್ಯೆಗೆ ಶರಣು
Bangalore,minor girl,committed suicide,nelamangala