Sunday, August 23, 2026

BDA Apartments

Home Cinema ಸಿನಿಮಾ ಪ್ಲಾಪ್ ! ನಿರ್ಮಾಪಕರಿಗೆ 8 ಕೋಟಿ ಪರಿಹಾರ ನೀಡುವಂತೆ ನಟ ವಿಶಾಲ್ ಗೆ ಕೋರ್ಟ್...

ಸಿನಿಮಾ ಪ್ಲಾಪ್ ! ನಿರ್ಮಾಪಕರಿಗೆ 8 ಕೋಟಿ ಪರಿಹಾರ ನೀಡುವಂತೆ ನಟ ವಿಶಾಲ್ ಗೆ ಕೋರ್ಟ್ ಆದೇಶ

ಬೆಂಗಳೂರು, ಅಕ್ಟೋಬರ್ 13, 2020 (www.justkannada.in): ಸಿನಿಮಾದಲ್ಲಿ ನಷ್ಟವಾಗಿದ್ದಕ್ಕೆ ನಟ ವಿಶಾಲ್ ನಿರ್ಮಾಪಕರಿಗೆ 8 ಕೋಟಿ ನೀಡುವಂತೆ ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದೆ.

ನಟ ವಿಶಾಲ್ ಹಾಗೂ ತಮನ್ನಾ ಅಭಿನಯದ ಆಕ್ಷನ್ ಸಿನಿಮಾ ಪ್ಲಾಪ್ ಆಗಿದ್ದು, ಇದರಿಂದಾದ ನಷ್ಟವನ್ನು ತುಂಬಿಕೊಡುವುದಾಗಿ ನಟ ವಿಶಾಲ್ ನಿರ್ಮಾಪಕರೊಂದಿಗೆ ಮೊದಲೇ ಒಪ್ಪಂದ ಮಾಡಿಕೊಂಡಿದ್ದರು.

ಆದರೆ ಸಿನಿಮಾದಲ್ಲಿ ನಷ್ಟವಾದರೂ ಕೂಡ ವಿಶಾಲ್ ಹಣ ನೀಡಲಿಲ್ಲ. ಆದಕಾರಣ ನಿರ್ಮಾಪಕರು ವಿಶಾಲ್ ಅವರು ಹಣ ನೀಡುವವರೆಗೂ ಅವರ ಚಕ್ರ ಸಿನಿಮಾ ರಿಲೀಸ್ ಮಾಡಬಾರದೆಂದು ಮದ್ರಾಸ್ ಹೈಕೋರ್ಟ್ ಗೆ ದೂರು ನೀಡಿದ್ದಾರೆ.

ಮದ್ರಾಸ್ ಹೈಕೋರ್ಟ್ ನಿರ್ಮಾಪಕರ ಮನವಿಗೆ ಸ್ಪಂದಿಸಿ ನಟ ವಿಶಾಲ್ 8 ಕೋಟಿ ನೀಡುವಂತೆ ಆದೇಶಿಸಿದೆ ಮತ್ತು ಅಲ್ಲಿಯವರೆಗೆ ಅವರ ಚಕ್ರ ಸಿನಿಮಾ ರಿಲೀಸ್ ಮಾಡಬಾರದೆಂದು ಸೂಚಿಸಿದೆ ಎನ್ನಲಾಗಿದೆ.