Friday, August 14, 2026

BDA Apartments

Home Front Page ಮೋದಿಗಾಗಿ ಜನರನ್ನು ಅಡವಿಡಲಾಗುತ್ತಿದೆ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ

ಮೋದಿಗಾಗಿ ಜನರನ್ನು ಅಡವಿಡಲಾಗುತ್ತಿದೆ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ

ಬೆಂಗಳೂರು,ಅಕ್ಟೋಬರ್,12,2020(www.justkannada.in) : ಮೋದಿಗಾಗಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಜನರನ್ನು ಅಡವಿಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.jk-logo-justkannada-logoಸರಕಾರವು ಶ್ರೀಮಂತರಿಗಾಗಿ ಕೆಲಸ ಮಾಡುತ್ತಿದೆ. ಕೋವಿಡ್ ಭಾರತದ ಅರ್ಥವ್ಯವಸ್ಥೆಯನ್ನು ನುಚ್ಚು ನೂರು ಮಾಡಿದೆ. ಕೇಂದ್ರ ಸರ್ಕಾರವು ರಾಜ್ಯಗಳಿಗೆ ಜಿಎಸ್ ಟಿ ರಾಜಸ್ವ ನೀಡುವ ಭರವಸೆ ನೀಡಿದ್ದರು. ಎಂಟು ಸಾವಿರ ಕೋಟಿ ವಿಮಾನವನ್ನೂ ಖರೀಸಿದ್ದಾರೆ. ಆದರೆ, ರಾಜ್ಯಗಳಿಗೆ ನೀಡಲು ಹಣವಿಲ್ಲ ಎಂದು ಕಿಡಿಕಾರಿದ್ದಾರೆ.

ಮುಖ್ಯಮಂತ್ರಿಗಳು ಮೋದಿಗಾಗಿ ಯಾಕೆ ಜನರ ಜೀವವನ್ನು ಅಡವಿಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದು, ಜಿಎಸ್ ಟಿ ಜಾರಿಗೊಳಿಸಿದ್ದರಿಂದ ರಾಜ್ಯಗಳಿಗೆ ಈ ವರ್ಷದ ಆದಾಯದಲ್ಲಿ 97 ಸಾವಿರ ಕೋಟಿ ರೂ. ಕೊರತೆಯಾಗಿದೆ ಎಂದು ಕೇಂದ್ರ ಅಂದಾಜು ಮಾಡಿದೆ. ಕೊವಿಡ್ 19 ಕಾರಣದಿಂದ ರಾಜ್ಯಗಳಿಗಾಗಿರುವ ಕೊರತೆ 1.38 ಲಕ್ಷ ಕೋಟಿ ಒಟ್ಟಾರೆ ಕೊರತೆ 2.35 ಲಕ್ಷ ಕೋಟಿ ರೂ. ಆಗಿದೆ ಎಂದು ಮಾಹಿತಿ ನೀಡಿದ್ದಾರೆ.Modi-harassing-people-Congress-leader-Rahul Gandhi-barrage

ರಾಜ್ಯಗಳಿಗೆ ಪರಿಹಾರ ನೀಡುವ ಸಂಬಂಧ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಸಚಿವರ ತಂಡ ರಚಿಸಬೇಕು ಎಂದು ಬಿಜೆಪಿಯೇತರ ಪಕ್ಷಗಳು ಆಡಳಿತವಿರುವ ರಾಜ್ಯಗಳು ಕಳೆದ ವಾರ ನಡೆದ ಸಭೆಯಲ್ಲಿ ಒತ್ತಾಯಿಸಿದ್ದವು.  ರಾಜ್ಯಗಳಿಗೆ ತೆರಿಗೆ ವರಮಾನದ ಕೊರತೆ ತುಂಬಿಕೊಡುವ ಕುರಿತು ಚರ್ಚಿಸಲು ಜಿಎಸ್ ಟಿ ಮಂಡಳಿಯು ಇಂದು ಸಭೆ ಸೇರುತ್ತಿರುವುದಾಗಿ ತಿಳಿಸಿದ್ದಾರೆ.

key words : Modi-harassing-people-Congress-leader-Rahul Gandhi-barrage