ಬಿಹಾರ ರಾಜ್ಯ ವಿಧಾನಸಭಾ ಎಲೆಕ್ಷನ್ ಗೆ ದಿನಾಂಕ ಫಿಕ್ಸ್: ಮೂರು ಹಂತದಲ್ಲಿ ಚುನಾವಣೆ….

ನವದೆಹಲಿ,ಸೆಪ್ಟಂಬರ್,25,2020(www.justkannada.in):   ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ.jk-logo-justkannada-logo

ಬಿಹಾರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದ್ದು ಮೊದಲ ಹಂತ ಅಕ್ಟೋಬರ್ 28, ಎರಡನೇ ಹಂತದ ಚುನಾವಣೆ ನವೆಂಬರ್ 3 ಹಾಗೂ ಮೂರನೇ ಹಂತ ನವೆಂಬರ್ 7 ರಂದು ಮತದಾನ ನಡೆಯಲಿದೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ತಿಳಿಸಿದ್ದಾರೆ.

243 ವಿಧಾನಸಭಾ ಕ್ಷೇತ್ರಗಳ ಪೈಕಿ ಅಕ್ಟೋಬರ್ 28ರಂದು ಮೊದಲ ಹಂತದಲ್ಲಿ 71 ವಿಧಾನಸಭಾ ಕ್ಷೇತ್ರಗಳಿಗೆ, ನವೆಂಬರ್ 3ರಂದು 2ನೇ ಹಂತದಲ್ಲಿ 94 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ 3ನೇ ಹಂತದಲ್ಲಿ 78 ಕ್ಷೇತ್ರಗಳಿಗೆ ನವೆಂಬರ್ 7 ರಂದು ಮತದಾನ ನಡೆಯಲಿದ್ದು ನವೆಂಬರ್ 10ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಸುನೀಲ್ ಆರೋರಾ ತಿಳಿಸಿದ್ದಾರೆ.bihar-assembly-election-date-fix-central-election-commission

ಕೊರೋನಾ ಸಂದರ್ಭದಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಗಿದ್ದು ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗುತ್ತದೆ. ಕೊರೋನಾ ಹಿನ್ನೆಲೆ ಈ ಬಾರಿ ಮತದಾನದ ಅವಧಿಯನ್ನ ಹೆಚ್ಚಳ ಮಾಡಲಾಗಿದ್ದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ವೋಟಿಂಗ್ ನಡೆಯಲಿದೆ . ಇನ್ನು ಕೊರೋನಾ ಸೋಂಕಿತರೂ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಮತದಾನ ಮುಗಿಯುವ ಅವಧಿಯಲ್ಲಿ ವೋಟಿಂಗ್ ಮಾಡಬಹುದು ಎಂದು ಸುನೀಲ್ ಅರೋರಾ ಮಾಹಿತಿ ನೀಡಿದ್ದಾರೆ.

Key words: Bihar- Assembly- Election- Date- Fix- central- election-commission