Tuesday, September 29, 2026

BDA Apartments

ಅಭಿಮಾನಿ ಕಷ್ಟಕ್ಕೆ ನೆರವಾದ ಚಾಲೆಂಜಿಂಗ್ ಸ್ಟಾರ್ ! BDA JK_Adv BDA Adv
Home Cinema ಅಭಿಮಾನಿ ಕಷ್ಟಕ್ಕೆ ನೆರವಾದ ಚಾಲೆಂಜಿಂಗ್ ಸ್ಟಾರ್ !

ಅಭಿಮಾನಿ ಕಷ್ಟಕ್ಕೆ ನೆರವಾದ ಚಾಲೆಂಜಿಂಗ್ ಸ್ಟಾರ್ !

ಬೆಂಗಳೂರು, ಜೂನ್ 11, 2019 (www.justkannada.in): ಅಭಿಮಾನಿಯೊಬ್ಬರಿಗೆ ನೆರವಾಗುವ ಮೂಲಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾನವೀಯತೆ ಮೆರೆದಿದ್ದಾರೆ.

ಇತ್ತೀಚಿಗಷ್ಟೆ ಅಪಘಾತದಲ್ಲಿ ಗಾಯಗೊಂಡು ಸಂಕಷ್ಟದಲ್ಲಿದ್ದ ಅಭಿನಯೊಬ್ಬರಿಗೆ ಆರ್ಥಿಕ ನೆರವು ನೀಡಿ ಮತ್ತೊಮ್ಮೆ ಸಾಮಾಜಿಕ ಕಳಕಳಿ ತೋರಿದ್ದಾರೆ.

ಮಂಡ್ಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ನಾಮಪತ್ರ ಸಲ್ಲಿಸುವ ವೇಳೆ ಮೆರಮಣಿಗೆಯಲ್ಲಿ ಪಾಲ್ಗೊಂಡಿದ್ದ ಕಿರಣ್ ಎನ್ನುವರು, ಮನೆಗೆ ವಾಪಸ್ ಆಗುವಾಗ ಅಪಘಾತ ಸಂಭವಿಸಿ ತೀವ್ರವಾಗಿ ಗಾಯಗೊಂಡಿದ್ದರು.

ಈ ವಿಚಾರ ತಿಳಿದ ದರ್ಶನ್ ಕಿರಣ್ ಕುಟುಂಬಕ್ಕೆ 1 ಲಕ್ಷ ಆರ್ಥಿಕ ನೆರವು ನೀಡಿದ್ದಾರೆ. ಬೇರೆಯವರ ಕಷ್ಟಕ್ಕೆ ಬಹುಬೇಗ ಸ್ಪಂದಿಸುವ ಡಿ ಬಾಸ್ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ.