Friday, August 14, 2026

BDA Apartments

Home Front Page ಕಾಡಾನೆ ದಾಳಿಗೆ ಮನೆ ಮೇಲ್ಚಾವಣಿ ಜಖಂ: ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು..

ಕಾಡಾನೆ ದಾಳಿಗೆ ಮನೆ ಮೇಲ್ಚಾವಣಿ ಜಖಂ: ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು..

ಮೈಸೂರು,ಜೂ,11,2019(www.justkannada.in): ರಾತ್ರೋರಾತ್ರಿ ಕಾಡಾನೆ ದಾಳಿ ಮಾಡಿದ ಪರಿಣಾಮ ಮನೆಯ ಮೇಲ್ಚಾವಣಿ ಜಖಂಗೊಂಡು ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ಎಚ್.ಡಿ.ಕೋಟೆ ತಾಲೂಕಿನ ಆನೆ ಮಾಳ ಹಾಡಿಯಲ್ಲಿ ಈ ಘಟನೆ ನಡೆದಿದೆ.  ಗ್ರಾಮದ ನಿವಾಸಿ ಸಿ.ಕಾಳ‌ ಎಂಬುವಬರ ಮನೆ ಮೇಲೆ ತಡರಾತ್ರಿ ಕಾಡಾನೆ ದಾಳಿ ನಡೆಸಿದ್ದು ಆನೆದಾಳಿಯಿಂದ ಮನೆಯ ಮೇಲ್ಚಾವಣಿ ಜಖಂಗೊಂಡಿತ್ತು. ಇನ್ನು ಕಾಡಾನೆ ದಾಳಿಯಿಂದ ಸದ್ಯ  ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ

ಆನೆ ದಾಳಿ ವೇಳೆ ಭಯಭೀತರಾಗಿದ ಮನೆಯಲ್ಲಿದ್ದ ಕುಟುಂಬಸ್ಥರು ಚೀರಾಡಿದ್ದಾರೆ. ಈಸಮಯದಲ್ಲಿ ನೆರೆಹೊರೆಯವರು  ಹೊರ ಬಂದು ಕಾಡಾನೆ ಓಡಿಸಿದ್ದಾರೆ. ಬೀಚನಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Key words: mysore -Elephant –attack-Escape -death