Sunday, August 2, 2026

BDA Apartments

Home Crime ನಟ ದರ್ಶನ್ ತೋಟಕ್ಕೆ ಮತ್ತೊಬ್ಬ ಅತಿಥಿ: ಯಜಮಾನನ ಮೃಗಾಲಯಕ್ಕೆ ಎಂಟ್ರಿ ಕೊಟ್ಟ “ಗಜೇಂದ್ರ”

ನಟ ದರ್ಶನ್ ತೋಟಕ್ಕೆ ಮತ್ತೊಬ್ಬ ಅತಿಥಿ: ಯಜಮಾನನ ಮೃಗಾಲಯಕ್ಕೆ ಎಂಟ್ರಿ ಕೊಟ್ಟ “ಗಜೇಂದ್ರ”

ಮೈಸೂರು,ಜೂ,11,2019(www.justkannada.in):  ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಪ್ರಾಣಿ ಪ್ರಿಯ ಅನ್ನೊಂದು ಎಲ್ಲಾರಿಗೂ ಗೊತ್ತೇ ಇದೆ.  ಫಾರ್ಮ್ ಹೌಸ್​ನಲ್ಲಿ ಹಲವು ವಿವಿಧ ರೀತಿಯ ಪ್ರಾಣಿಗಳನ್ನ  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಕಿದ್ದಾರೆ. ಇದೀಗ ನಟ ದರ್ಶನ್ ಫಾರ್ಮ್ ಹೌಸ್ ಗೆ ಮತ್ತೊಂದು ಅತಿಥಿಯ ಆಗಮನವಾಗಿದೆ.

ಮೈಸೂರು ಬಳಿಯ ಟಿ ನರಸೀಪುರ ರಸ್ತೆಯಲ್ಲಿರುವ ತೂಗುದೀಪ ಫಾರ್ಮ್ ಹೌಸ್​ನಲ್ಲಿ ಹಸು, ಕುದುರೆ, ನಾಯಿ ಸೇರಿದಂತೆ ಹಲವಾರು ಪ್ರಾಣಿಗಳ ಜೊತೆ ಉಷ್ಟ್ರಪಕ್ಷಿ ಪಕ್ಷಿಯನ್ನು ನಟ ದರ್ಶನ್ ಸಾಕಿದ್ದಾರೆ. ಇದೀಗ  ಯಜಮಾನನ ಮೃಗಾಲಯಕ್ಕೆ ಮತ್ತೊಂದು ಕುದುರೆ ಎಂಟ್ರಿಕೊಟ್ಟಿದ್ದು ಕುದುರೆಗೆ  ಗಜೇಂದ್ರ ಎಂದು ನಟ ದಚ್ಚು ಹೆಸರಿಟ್ಟಿದ್ದಾರೆ.

ಫಾರ್ಮ್ ಹೌಸ್​ನಲ್ಲಿ ನಟ ದರ್ಶನ್ ಈಗಾಗಲೇ ಸಾಕಷ್ಟು ಕುದುರೆಗಳನ್ನು ಸಾಕಿದ್ದಾರೆ. ಈಗ ಮತ್ತೊಂದು ಕುದುರೆ ಇವುಗಳ ಜೊತೆ ಸೇರಿದೆ. ಚಿಕ್ಕ ವಯಸ್ಸಿನಿಂದಲೂ ಕುದುರೆ ಬಗ್ಗೆ ಸಾಕಷ್ಟು ಒಲವು ದರ್ಶನ್‌‌ ಬೆಳೆಸಿಕೊಂಡಿದ್ದು, ಮಹಾರಾಷ್ಟ್ರದಿಂದ  ಗಜೇಂದ್ರ ಎನ್ನುವ ಬಿಳಿ ಬಣ್ಣದ ಕುದುರೆ ಮರಿಯನ್ನು ಖರೀದಿಸಿದ್ದಾರೆ‌. ಇನ್ನು  ಗಜೇಂದ್ರ ಹೆಸರಿನ ವಿಶೇಷ ಏನಪ್ಪ ಅಂದ್ರೆ ದರ್ಶನ್ ಅಭಿನಯದ ಒಡೆಯ ಚಿತ್ರದಲ್ಲಿ ದರ್ಶನ್ ಪಾತ್ರದ  ಹೆಸರು ಕೂಡ ಗಜೇಂದ್ರ.ಈಗ ದರ್ಶನ್ ಅದೇ ಹೆಸರನ್ನು ತಮ್ಮ ಕುದುರೆಗೆ ನಾಮಕರಣ ಮಾಡಿದ್ದಾರೆ.

Key words: mysore -Another -guest -actorDarshan -FarmHouse.