Friday, July 31, 2026

BDA Apartments

Home Cinema ಬೇಬಿ ಬಂಪ್ ಫೋಟೋ ಮೂಲಕವೇ ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ ಸಮೀರಾ ರೆಡ್ಡಿ

ಬೇಬಿ ಬಂಪ್ ಫೋಟೋ ಮೂಲಕವೇ ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ ಸಮೀರಾ ರೆಡ್ಡಿ

ಮುಂಬೈ:ಜೂ-10:(www.justkannada.in) ಬಹುಭಾಷಾ ನಟಿ ಸಮೀರಾ ರೆಡ್ಡಿ ತಮ್ಮ ಬೇಬಿ ಬಂಪ್ ಫೋಟೋ ಗಳಿಗೆ ನೆಟ್ಟಿಗರು ಮಾಡಿದ ಟ್ರೊಲ್ ಗಳಿಗೆ ಬೇಬಿ ಬಂಪ್ ಫೋಟೋ ಮೂಲಕವೇ ಖಡಕ್ ಉತ್ತರ ನೀಡಿದ್ದಾರೆ.

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಸಮೀರಾ ರೆಡ್ಡಿ ಈಗ 8 ತಿಂಗಳ ಗರ್ಭಿಣಿ. ಆಗಾಗ ಸಮೀರಾ ತಮ್ಮ ಬೇಬಿ ಬಂಪ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ಹಲವು ದಿನಗಳಿಂದಲೂ ನೆಟ್ಟಿಗರು ಈ ಬಗ್ಗೆ ಟಾರ್ಗೆಟ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಈಗಾಗಲೇ ಹಲವು ಬಾರಿ ಟ್ರೋಲಿಗರಿಗೆ ಖಡಕ್ ತಿರುಗೇಟು ನೀಡಿರುವ ಸಮೀರಾ ಈ ಬಾರಿಯೂ ಬೆವರಿಳಿಸಿದ್ದಾರೆ.

ಸಧ್ಯ ಸಮೀರಾ ತಮ್ಮ ಪತಿ ಅಕ್ಷಯ್ ವಾರ್ದೆ ಹಾಗೂ ಮಗ ಹಂಸ್ ಜೊತೆ ಗೋವಾದಲ್ಲಿ ರಜೆಯನ್ನು ಕಳೆಯುತ್ತಿದ್ದು, ತಮ್ಮ ಮಗನ ಜೊತೆ ಸಮುದ್ರದಲ್ಲಿ ಕಾಲ ಕಳೆಯುತ್ತಿರುವ ಫೋಟೋ ಹಾಗೂ ತಮ್ಮ ಬೇಬಿ ಬಂಪ್ ಫೊಟೋ ಗಳನ್ನು ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ಇದೇ ವೇಳೆ ಸಮೀರಾ, ಬಿಕಿನಿ ಧರಿಸಿ ತನ್ನ ಬೇಬಿ ಬಂಪ್ ಕಾಣಿಸುವಂತೆ ಸಮುದ್ರ ತೀರದಲ್ಲಿ ನಿಂತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಯಾರು ಆಳವಿಲ್ಲದ ತುದಿಯಲ್ಲಿ ಈಜುತ್ತಾರೆಯೋ ಅವರು ವ್ಯಕ್ತಿಯ ಆತ್ಮದ ಆಳವನ್ನು ತಿಳಿದಿರುವುದಿಲ್ಲ. ಜನಿಸಲು ಸಿದ್ಧರಾಗಿರುವ ನನ್ನ ಮಗು ಆತ್ಮ ತುಂಬಾ ನೋವನುಭವಿಸುತ್ತಿದೆ. ನನ್ನ ಹೊಟ್ಟೆಯಲ್ಲಿ ಸ್ವಿಮ್ ಮಾಡುತ್ತಿರುವ ಮಗುವಿನ ಆತ್ಮವನ್ನು ಗಾಯಗೊಳಿಸಿದ್ದಾರೆ. ನನ್ನ ಪ್ರೆಗ್ನಿನ್ಸಿಯನ್ನು ಎಂಜಾಯ್ ಮಾಡಲು ಯಾರೆಲ್ಲಾ ಕಿರಿಕಿರಿ ಅನುಭವಿಸಿದ್ದಾರೆ ಅವರೆಲ್ಲರಿಗೂ ಇದೇ ನನ್ನ ಉತ್ತರ ಎಂದು ಬರೆದುಕೊಂಡಿದ್ದಾರೆ.

ಬೇಬಿ ಬಂಪ್ ಫೋಟೋ ಮೂಲಕವೇ ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ ಸಮೀರಾ ರೆಡ್ಡೆ
Pregnant Sameera Reddy hits back at trolls with bikini photo