Sunday, August 16, 2026

BDA Apartments

Home Front Page ಕರ್ನಾಟಕದಲ್ಲೇ ಕ್ಯಾಸಿನೋ ಓಪನ್ ಮಾಡಿ ಎಂದ ಜೆಡಿಎಸ್ ಶಾಸಕ…

ಕರ್ನಾಟಕದಲ್ಲೇ ಕ್ಯಾಸಿನೋ ಓಪನ್ ಮಾಡಿ ಎಂದ ಜೆಡಿಎಸ್ ಶಾಸಕ…

ಮಂಡ್ಯ,ಸೆಪ್ಟಂಬರ್,16,2020(www.justkannada.in):  ಕರ್ನಾಟಕದ ದುಡ್ಡೆಲ್ಲ ಶ್ರೀಲಂಕಾ ಕ್ಯಾಸಿನೋಗೆ ಹೋಗುತ್ತಿದೆ. ನಮ್ಮ ಹಣ ನಮ್ಮಲ್ಲೇ ಉಳಿಯಬೇಕಾದರೇ ಕ್ಯಾಸಿನೋವನ್ನು ಕರ್ನಾಟಕದಲ್ಲೇ ಓಪನ್ ಮಾಡಿ ಎಂದು ಸರ್ಕಾರಕ್ಕೆ ಸಲಹೆ ಕೊಡುತ್ತೇನೆಂದು ಜೆಡಿಎಸ್ ಶಾಸಕ ಸುರೇಶ್ ಗೌಡ  ಹೇಳಿದ್ದಾರೆ.jk-logo-justkannada-logo

ಇಂದು ಮಾಧ್ಯಮಗಳ ಜತೆ ಮಾತನಾಡಿದ ಜೆಡಿಎಸ್ ಶಾಸಕ ಸುರೇಶ್ ಗೌಡ,  ಕ್ಯಾಸಿನೋಗೆ ಜಮೀರ್ ಮಾತ್ರವಲ್ಲ, ಇಡೀ ಟೀಂ ಹೋಗುತ್ತೆ. ಕರ್ನಾಟಕದ ಹಣ ಶ್ರೀಲಂಕಾದ ಕ್ಯಾಸಿನೋಗೆ ಹೋಗುತ್ತೆ. ಹೀಗಾಗಿ ನಮ್ಮ ನಮ್ಮಲ್ಲೇ ಉಳಿಯಲು ಕರ್ನಾಟಕದಲ್ಲೇ ಕ್ಯಾಸಿನೋ ಓಪನ್ ಮಾಡಿ. ಹಣವೊಂದಿದ್ದರೇ ಎಲ್ಲಾ ಸಿಗುತ್ತದೆ ಎಂದರು.

ರಾಜಕಾರಣಿಗಳು ಡ್ರಗ್ಸ್ ತೆಗೆದುಕೊಳ್ಳುವ ಬಗ್ಗೆ ನನಗೆ ಗೊತ್ತಿಲ್ಲ. ನಾವು ಜಮೀರ್ ಅವರನ್ನು ಟಾರ್ಗೆಟ್ ಮಾಡುತ್ತಿಲ್ಲ. ನಾವು ಕಾಂಗ್ರೆಸ್ ಪರ ಇದ್ದು ಸರ್ಕಾರ ಮಾಡಿದ್ದವರು. ನಾವು ಯಾಕೆ ಅವರನ್ನು ಟಾರ್ಗೆಟ್ ಮಾಡ್ತೀವಿ. ಇದೆಲ್ಲವೂ ಊಹಾಪೋಹಗಳು ಎಂದು ಸುರೇಶ್ ಗೌಡ ತಿಳಿಸಿದರು.mandya-jds-mla-casino-open-karnataka

ಇನ್ನು ರಾಜ್ಯ ಬಿಜೆಪಿ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಡಲು ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಾಟೆ ಮುಂದಿಟ್ಟಿದ್ದರು. ಈಗ ಅದು ಮುಗಿದ ಬಳಿಕ ಡ್ರಗ್ಸ್ ವಿಚಾರ ಶುರು ಮಾಡಿದೆ. ಇದು ಬಿಜೆಪಿ ನಿಯೋಜಿತ ಕಾರ್ಯಗಳು. ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗುತ್ತಿದೆ ಎಂದು ಶಾಸಕ ಸುರೇಶ್ ಗೌಡ ಆರೋಪಿಸಿದರು.

 

Key words: mandya- JDS- MLA- Casino -Open -Karnataka