Wednesday, August 19, 2026

BDA Apartments

Home Front Page ಕೊರೊನಾ ಕರಿಛಾಯೆ : ಸೆ.16ರಿಂದ ಮೂರು ದಿನ ಮಾದಪ್ಪನ ದರ್ಶನಕ್ಕಿಲ್ಲ ಅವಕಾಶ

ಕೊರೊನಾ ಕರಿಛಾಯೆ : ಸೆ.16ರಿಂದ ಮೂರು ದಿನ ಮಾದಪ್ಪನ ದರ್ಶನಕ್ಕಿಲ್ಲ ಅವಕಾಶ

ಚಾಮರಾಜನಗರ,ಸೆಪ್ಟೆಂಬರ್,13,2020(www.justkannda.in) : ಕೊರೊನಾ ಹಿನ್ನೆಲೆ ಸೆ.16ರಿಂದ 18ರವರೆಗೆ ಮಲೆ ಮಹದೇಶ್ವರ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿ ಚಾಮರಾಜನಗರದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.

jk-logo-justkannada-logo

ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಇದೇ 16ರಿಂದ 18ರವರೆಗೆ ಮಲೆ ಮಹದೇಶ್ವರ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಸೆ.16ರಿಂದ 18ರವರೆಗೆ ದೇವರಿಗೆ ಎಣ್ಣೆ ಮಜ್ಜನ, ಅಮವಾಸ್ಯೆ ವಿಶೇಷ ಪೂಜೆ ನಡೆಯುವುದರಿಂದ ಭಕ್ತರ ಸಂಖ್ಯೆ ಅಧಿಕವಾಗಲಿರುವ ಹಿನ್ನೆಲೆ, ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯ. ಹೀಗಾಗಿ, ಡಿಸಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಿರುವುದಾಗಿ ತಿಳಿಸಿದ್ದಾರೆ.

Corona,Curriculum,Sep.16,three,day,modeling,opportunity

ಅನ್ ಲಾಕ್ ಬಳಿಕ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಪ್ರಾಧಿಕಾರದ ಸಾರಿಗೆ ವ್ಯವಸ್ಥೆ, ಲಾಡು ಮಾರಾಟಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೊತೆಗೆ ಭಕ್ತರಿಗೆ ಬೆಟ್ಟದಲ್ಲಿ ವಾಸ್ತವ್ಯಕ್ಕೆ ಇನ್ನೂ ಅವಕಾಶ ನೀಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.

key words : Corona-Curriculum-Sep.16-three-day-modeling-opportunity