Sunday, August 16, 2026

BDA Apartments

Home Crime ವಿಲೀಂಗ್ ಮಾಡ್ಬೇಡಿ ಅಂತ ಹೇಳಿದ್ದಕ್ಕೆ ಯುವಕನ ಬರ್ಬರ ಹತ್ಯೆ

ವಿಲೀಂಗ್ ಮಾಡ್ಬೇಡಿ ಅಂತ ಹೇಳಿದ್ದಕ್ಕೆ ಯುವಕನ ಬರ್ಬರ ಹತ್ಯೆ

ಮೈಸೂರು,ಸೆಪ್ಟೆಂಬರ್, 13, 2020(www.justkannada.in) : ವಿಲೀಂಗ್ ಮಾಡ್ಬೇಡಿ ಅಂತ ಹೇಳಿದ್ದಕ್ಕೆ ಯುವಕನ ಬರ್ಬರ ಹತ್ಯೆ ಮಾಡಲಾಗಿದ್ದು, ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.

jk-logo-justkannada-logo

ತಿ.ನರಸೀಪುರ ತಾಲ್ಲೂಕು ಕೇತುಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಿದ್ದರಾಜು (೨೬)ಎಂಬುವವರನ್ನು ಹತ್ಯೆ ಮಾಡಲಾಗಿದೆ. ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರಂಭದಲ್ಲಿ ಹತ್ಯೆಯು ಹಳೇ ವೈಷಮ್ಯಕ್ಕೆ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿತ್ತು. ಆದರೆ, ತನಿಖೆಯ ಬಳಿಕ ವಿಲೀಂಗ್ ವಿಚಾರಕ್ಕೆ ಹತ್ಯೆ ನಡೆಸಿರುವುದಾಗಿ ತಿಳಿದು ಬಂದಿದೆ.

WELLING-MODDBEY-murder-young-man

ಗ್ರಾಮದ ಚಿಕ್ಕರಸ್ತೆಯಲ್ಲಿ ವಿಲೀಂಗ್ ಮಾಡೋದು, ಮತ್ತಿತರ ಆಟೋಟೋಪಾಗಳಲ್ಲಿ  ಭಾಗಿಯಾಗಿದ್ದಾರೆ ಎಂಬ ಆರೋಪ ಸಂಬಂಧಿಸಿದಂತೆ ಎರಡು ದಿನದ ಹಿಂದೆ ಗಲಾಟೆ ನಡೆದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದೂರು ನೀಡಿದ ಹಿನ್ನಲೆ ನೆನ್ನೆ ರಾತ್ರಿ ಸಿದ್ದರಾಜು ಅವರ ಮೇಲೆ ಏಕಾಏಕಿ ದಾಳಿ ನಡೆಸಿದ ಯುವಕರ ಗುಂಪೊಂದು ಈ ವೇಳೆ ಕಣ್ಣಿಗೆ ಕಾರದಪುಡಿ ಎರಜಿ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಯಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಸಿದ್ದರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಗಲಾಟೆ ತಡೆಯಲೂ ಹೋದ ಮೃತ ಯುವಕನ ಚಿಕ್ಕಪನ ಮೇಲೂ ಹಲ್ಲೆ ನಡೆಸಲಾಗಿದ್ದು, ಘಟನೆ ನಂತರ ಹಲ್ಲೆ ನಡೆಸಿದ್ದ  ಯುವಕರ ಗುಂಪು ಪರಾರಿಯಾಗಿತ್ತು. ಪ್ರಕರಣ ದಾಖಲಾದ ಕೆಲವೇ ಘಂಟೆಗಳಲ್ಲಿ ಎಎಸ್‌ಪಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪರಾಧಿಗಳನ್ನು ಬಂಧಿಸಿದ್ದಾರೆ.

key words ; WELLING-MODDBEY-murder-young-man