ರಾಜ್ಯಾದ್ಯಂತ ಬೆಳೆ ವಿಮೆ ಪರಿಹಾರ ಬಿಡುಗಡೆಗೆ ಒತ್ತಾಯ: ಸಚಿವ ಬಿ.ಸಿ ಪಾಟೀಲ್ ಗೆ ರೈತ ಮುಖಂಡರಿಂದ ಮನವಿ ಸಲ್ಲಿಕೆ…

ಮೈಸೂರು,ಸೆಪ್ಟಂಬರ್,8,2020(www.justkannada.in):  ರಾಜ್ಯದ ರೈತರು ಬೆಳೆ ವಿಮೆ ಹಣವನ್ನು ಕಟ್ಟಿದರೂ  ಬೆಳೆ ನಷ್ಟ ಪರಿಹಾರ ಹಣ ರೈತರಿಗೆ ಎರಡು ವರ್ಷಗಳಿಂದ ಸಂದಾಯವಾಗಿಲ್ಲ. ಹೀಗಾಗಿ ರಾಜ್ಯಾದ್ಯಂತ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ರಾಜ್ಯ  ಕಬ್ಬು ಬೆಳೆಗಾರರ ಸಂಘದ ಸದಸ್ಯರು ಸಚಿವ ಬಿ.ಸಿ ಪಾಟೀಲ್ ಗೆ ಮನವಿ  ಮಾಡಿದರು.jk-logo-justkannada-logo

ಇಂದು ಮೈಸೂರಿಗೆ ಆಗಮಿಸಿದ್ದ ಸಚಿವ ಬಿ.ಸಿ ಪಾಟೀಲ್ ಅವರನ್ನ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ರೈತಮುಖಂಡರು ಭೇಟಿಯಾಗಿ ಮನವಿ ಸಲ್ಲಿಸಿದರು.

ಬೆಳೆ ವಿಮಾ ಕಂಪನಿಗಳು ದೊಡ್ಡ ದೊಡ್ಡ ಜಾಹೀರಾತು ನೀಡಿರೈತರ ಬಳಿ ಬೆಳೆ ವಿಮೆ ಹಣ ಕಟ್ಟಿಸಿಕೊಳ್ಳುತ್ತಾರೆ.  ಆದರೆ ಬೆಳೆ ನಷ್ಟ ಪರಿಹಾರವನ್ನು ನೀಡಲು ಸತಾಯಿಸುತ್ತಾರೆ. ಹಿಂದಿನ ವರ್ಷದ ಬೆಳೆನಷ್ಟ ಪರಿಹಾರ ಸುಮಾರು 600 ಕೋಟಿಯಷ್ಟು ರೈತರಿಗೆ ಬರಬೇಕಿದೆ. ಪ್ರಸಕ್ತ ಸಾಲಿನಲ್ಲಿಯೂ ಬೆಳೆವಿಮೆ ನಷ್ಟ ಪರಿಹಾರ ಹಣ ಬಂದಿಲ್ಲ. ರೈತರು ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಸಚಿವ ಬಿ.ಸಿ ಪಾಟೀಲ್ ಗೆ ಒತ್ತಾಯಿಸಿದರು.demand-release-crop-insurance-appeal-farmer-leaders-minister-bc-patil-mysore

ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ರೈತರ ಖಾತೆಗೆ ಬೆಳೆವಿಮಾ ಪರಿಹಾರದ ಹಣವನ್ನು ಜಮೆ ಮಾಡಲಾಗುತ್ತಿದೆ. ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಹೀಗಾಗಿ ರೈತರು ಆತಂಕ ಪಡಬಾರದು. ಬಿಳಿ ಜೋಳದ ಬೆಲೆ ಕುಸಿದಿರುವುದು ತಿಳಿದು ಬಂದಿದೆ. ಸರ್ಕಾರ ಖರೀದಿ ಕೇಂದ್ರವನ್ನು ತೆರೆದು ನೇರವಾಗಿ ರೈತರಿಂದಲೇ ಖರೀದಿಸಲು ಚಿಂತನೆ ನಡೆಸಲಾಗುತ್ತದೆ ಎಂದು ಸಚಿವ ಬಿ.ಸಿ ಪಾಟೀಲ್ ಭರವಸೆ ನೀಡಿದರು.

ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿಗೆ ತರಬಾರದು ಎಂಬ ರೈತರ ಒತ್ತಾಯ ಕುರಿತು ಪ್ರತಿಕ್ರಿಯಿಸಿದ ಸಚಿವ ಬಿ.ಸಿ ಪಾಟೀಲ್, ರೈತರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ.  ನಾನೂ ಕೂಡ ಸಂಪುಟ ಸಭೆಯಲ್ಲಿ ಈ ಬಗ್ಗೆ ನನ್ನ ಅಭಿಪ್ರಾಯ ಮಂಡಿಸುತ್ತೇನೆ ಎಂದರು.

Key words: Demand – release – crop insurance- Appeal – farmer leaders-minister- BC patil-mysore