Thursday, October 1, 2026

BDA Apartments

Welcome to Just Kannada Online News Portal BDA JK_Adv BDA Adv
Home Front Page ಇಂದು ಮೈಸೂರಿಗೆ ಸಿಎಂ ಪುತ್ರ ವಿಜಯೇಂದ್ರ…

ಇಂದು ಮೈಸೂರಿಗೆ ಸಿಎಂ ಪುತ್ರ ವಿಜಯೇಂದ್ರ…

ಮೈಸೂರು, ಸೆಪ್ಟಂಬರ್, 8,2020(www.justkannada.in): ಹಳೇ ಮೈಸೂರು ಭಾಗದಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿರುವ ಸಿಎಂ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಇಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಲಿದ್ದಾರೆ.

ಮಂಡ್ಯ ಮತ್ತು ಮೈಸೂರು ಹಾಗೂ ಚಾಮರಾಜನಗರದಲ್ಲಿ ಪ್ರವಾಸ ಕೈಗೊಂಡಿರುವ ಬಿ. ವೈ ವಿಜಯೇಂದ್ರ ಇಂದು ಮೊದಲಿಗೆ ಮಂಡ್ಯ ಬಿಜೆಪಿ ಕಛೇರಿಗೆ ಭೇಟಿ ನೀಡಲಿದ್ದಾರೆ. ನಂತರ ಮೈಸೂರಿಗೆ ಆಗಮಿಸಿ ನಗರದ ರಾಮಕೃಷ್ಣಾಶ್ರಮಕ್ಕೆ ಭೇಟಿ ನೀಡಿ ಬಳೀಕ ಚಾಮುಂಡಿಬೆಟ್ಟಕ್ಕೆ ತೆರಳಲಿದ್ದಾರೆ.cm-son-vijayendra-visit-mysore-today

ಇನ್ನು ಬುಧವಾರ ನಂಜನಗೂಡಿನ ಮಲ್ಲನಮೂಲೆ ಮತ್ತು ದೇವನೂರು ಹಾಗೂ ಹರವೆ ಮಠಗಳಿಗೆ ಭೇಟಿ ನೀಡಲಿರುವ ವಿಜಯೇಂದ್ರ ಇದಾದ ಬಳಿಕ ಚಾಮರಾಜನಗರ ಬಿಜೆಪಿ ಕಛೇರಿಗೆ  ತೆರಳಿ ನಂದಿ ಭವನದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಪ್ರವಾಸ ಕೈಗೊಳ್ಳುವ ಮೂಲಕ ಮುಂಬರುವ ಗ್ರಾ.ಪಂ ಚುನಾವಣೆಯಲ್ಲಿ  ಕಾರ್ಯಕರ್ತರಿಗೆ ಉತ್ಸಾಹ ನೀಡಲು ವಿಜಯೇಂದ್ರ ಮುಂದಾಗಿದ್ದಾರೆ.

Key words: CM- son – Vijayendra-visit- Mysore -today