Tuesday, August 4, 2026

BDA Apartments

Home Front Page ಕೊರೋನಾ ಮಧ್ಯೆ ದ್ವೇಷದ ರಾಜಕಾರಣ- ಸರ್ಕಾರದ ವಿರುದ್ದ ಜೆಡಿಎಸ್ ಶಾಸಕ ಗರಂ…

ಕೊರೋನಾ ಮಧ್ಯೆ ದ್ವೇಷದ ರಾಜಕಾರಣ- ಸರ್ಕಾರದ ವಿರುದ್ದ ಜೆಡಿಎಸ್ ಶಾಸಕ ಗರಂ…

ತುಮಕೂರು,ಸೆಪ್ಟಂಬರ್, 6,2020(www.justkannada.in):  ಕೊರೋನಾ ಮಧ್ಯೆ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಜೆಡಿಎಸ್ ಶಾಸಕ ಗೌರಿ ಶಂಕರ್ ಕಿಡಿಕಾರಿದ್ದಾರೆ.

ಸರ್ಕಾರದಿಂದ ಅನುದಾನ ಕುರಿತು ತುಮಕೂರಿನಲ್ಲಿ ಇಂದು ಮಾತನಾಡಿದ ಶಾಸಕ ಗೌರಿ ಶಂಕರ್,  ಜನರ ಅವಶ್ಯಕತೆಗೆ ತಕ್ಕಂತೆ ಪಟ್ಟಿ ಸಿದ್ಧಪಡಿಸಬೇಕು. ಆದರೆ ಇಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಅವರೇ ಪಟ್ಟಿ ಸಿದ್ಧಪಡಿಸುತ್ತಾರೆ. ಈ ಮೂಲಕ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಕೊರೋನಾ ಮಧ್ಯೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.hostility-politics-jds-mla-gowri-shankar-against-government

ಹಾಗೆಯೇ ಸಂಸದ ಬಸವರಾಜು ಒಂದು ಕೋಟಿ ಅನುದಾನ ತಡೆಗೆ ಪತ್ರಬರೆದಿದ್ದಾರೆ ಎಂದು ಶಾಸಕ ಗೌರಿ ಶಂಕರ್ ಆರೋಪಿಸಿದರು.

Key words: Hostility- politics – JDS MLA –Gowri Shankar- against – government.