Thursday, August 13, 2026

BDA Apartments

Home Cinema ಬಹುಕಾಲದ  ಗೆಳತಿ ಜತೆ ಸಪ್ತಪದಿ ತುಳಿದ ನಟ ವಿನಾಯಕ್ ಜೋಶಿ…

ಬಹುಕಾಲದ  ಗೆಳತಿ ಜತೆ ಸಪ್ತಪದಿ ತುಳಿದ ನಟ ವಿನಾಯಕ್ ಜೋಶಿ…

ಬೆಂಗಳೂರು,ಆಗಸ್ಟ್,28,2020(www.justkannada.in):  ನಟ ವಿನಾಯಕ್ ಜೋಶಿ ತಮ್ಮ ಬಹುಕಾಲದ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.actor-vinayak-joshi-girlfriend-marriage

ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ವರ್ಷಾ ಬೆಳವಾಡಿ‌ ಜೊತೆ ನಟ  ವಿನಾಯಕ್ ಜೋಶಿ ಇಂದು ಸಪ್ತಪದಿ ತುಳಿದು ವೈವಾಹಿಕ ಜೀವನ ಆರಂಭಿಸಿದ್ದಾರೆ.  ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕೇವಲ ಸ್ನೇಹಿತರು,ಆಪ್ತರಷ್ಟೇ ಭಾಗಿಯಾಗಿದ್ದರು. ಮದುವೆ ಸಮಾರಂಭಕ್ಕೆ 15 ರಿಂದ 55 ವರ್ಷದೊಳಗಿನವರಿಗಷ್ಟೇ ಪಾಲ್ಗೊಳ್ಳಲು ಅವಕಾಶವಿತ್ತು.actor-vinayak-joshi-girlfriend-marriage

ವರ್ಷಾ ಬೆಳವಾಡಿ ಅವರು  ವರ್ಲ್ಡ್ ರ್ಯಾಂಕಿಗ್ ನಲ್ಲಿ 120 ನೇ ಸ್ಥಾನದಲ್ಲಿದ್ದರು. ಸದ್ಯಕ್ಕೆ ಬ್ಯಾಡ್ಮಿಂಟನ್ ಕೋಚ್ ಆಗಿದ್ದಾರೆ. ಇಬ್ಬರು ಬಾಲ್ಯದ ಗೆಳೆಯರಾಗಿದ್ದು, ಕೆಲ ವರ್ಷಗಳ ಕಾಲ ಬೇರೆ ಬೇರೆ ಊರುಗಳಲ್ಲಿ ವಾಸಿಸುವಂತಾಗಿತ್ತು.  ಎರಡು ದಶಕದ ನಂತರ ಇಬ್ಬರು ಅಚಾನಕ್ಕಾಗಿ ಭೇಟಿಯಾಗಿದ್ದರು. ಆನಂತರದಲ್ಲಿ ಮತ್ತೆ ಸ್ನೇಹ ಬೆಳೆದು, ಪ್ರೀತಿಯಲ್ಲಿ ಬಿದ್ದಿದ್ದರು. ಇನ್ನು ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಮತ್ತೊಮ್ಮೆ ಸ್ನೇಹಿತರಿಗಾಗಿ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ.

Key words: Actor -Vinayak Joshi – girlfriend-marriage