Thursday, September 17, 2026

BDA Apartments

ಅಬುಧಾಬಿಯಲ್ಲಿ ಹೆಚ್ಚಿದ ಕೊರೊನಾ ಸೋಂಕು: ಐಪಿಎಲ್’ಗೆ ಹೊಸ ಕಂಟಕ BDA JK_Adv BDA Adv
Home Front Page ಅಬುಧಾಬಿಯಲ್ಲಿ ಹೆಚ್ಚಿದ ಕೊರೊನಾ ಸೋಂಕು: ಐಪಿಎಲ್’ಗೆ ಹೊಸ ಕಂಟಕ

ಅಬುಧಾಬಿಯಲ್ಲಿ ಹೆಚ್ಚಿದ ಕೊರೊನಾ ಸೋಂಕು: ಐಪಿಎಲ್’ಗೆ ಹೊಸ ಕಂಟಕ

ಯುಎಇ, ಆಗಸ್ಟ್ 27, 2020 (www.justkannada.in): ಅಬುಧಾಬಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ತೀವ್ರತೆ ಹೆಚ್ಚಾಗುತ್ತಿದೆ. ಇದು ಬಿಸಿಸಿಐ ತಲೆಬಿಸಿಗೆ ಕಾರಣವಾಗಿದೆ.

ಅಬುಧಾಬಿಯಲ್ಲಿ 21 ಗ್ರೂಪ್​​ ಮ್ಯಾಚ್​​ಗಳು ಹಾಗೂ ಕೆಲವು ಪ್ಲೇ-ಆಫ್​ ಪಂದ್ಯ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಕೊರೊನಾ ಆತಂಕದ ಕಾರಣಗಳಿಂದ ಐಪಿಎಲ್​ ಅಧಿಕೃತ ವೇಳಾಪಟ್ಟಿಯನ್ನ ಬಿಸಿಸಿಐ ಪ್ರಕಟಿಸಲು ವಿಳಂಬ ಮಾಡುತ್ತಿದೆ.

ಸದ್ಯ ಆಟಗಾರರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದುಕೊಂಡು ಹೋಗುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಭಾರತದಲ್ಲಿ ಕೊರೊನಾ ಕಡಿಮೆ ಆಗದ ಹಿನ್ನೆಲೆಯಲ್ಲಿ, ಯುಎಇಗೆ ಟೂರ್ನಿಯನ್ನ ಸ್ಥಳಾಂತರ ಮಾಡಲಾಗಿತ್ತು.  ಇದೀಗ ಅಲ್ಲಿಯೂ ಸೋಂಕು ವ್ಯಾಪಾಕವಾಗಿ ಹರಡುತ್ತಿರುವುದು ಆಟಗಾರರಿಗೂ ತಲೆನೋವಾಗಿದೆ.