Wednesday, August 19, 2026

BDA Apartments

Home Front Page ರಾಜ್ಯ ಬಿಜೆಪಿ ಸಂಸದರನ್ನು ಅಂಜುಬುರುಕರು ಎಂದು ಕರೆದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ….

ರಾಜ್ಯ ಬಿಜೆಪಿ ಸಂಸದರನ್ನು ಅಂಜುಬುರುಕರು ಎಂದು ಕರೆದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ….

ಬೆಂಗಳೂರು,ಆಗಸ್ಟ್,26,2020(www.justkannada.in): ರಾಜ್ಯದಲ್ಲಿ ನೆರೆಹಾವಳಿ ಉಂಟಾಗಿದ್ದರೂ ಜನರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಆಗಮಿಸಿಲ್ಲ. . 25  ಸಂಸದರು ರಾಜ್ಯದಿಂದ ಗೆದ್ದಿದ್ದಾರೆ. ಅಂಜುಬುರುಕ ಸಂಸದರನ್ನ ರಾಜ್ಯದ ಜನ ಆರಿಸಿದ್ದಾರೆ. ನೆರೆಪರಿಹಾರಕ್ಕಾಗಿ ಮನವಿ ಮಾಡಲು ಪ್ರಧಾನಿಯವರಿಗೆ ಇವರು ಹೆದರುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಲೇವಡಿ ಮಾಡಿದರು.jk-logo-justkannada-logo

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ರಾಜ್ಯದ 56 ತಾಲ್ಲೂಕು, 1000ಕ್ಕೂ ಹೆಚ್ಚು ಹಳ್ಳಿಗಳಿಗೆ ನೆರೆ ಬಿಸಿ ತಟ್ಟಿದೆ. 3000 ಮನೆ ಕುಸಿತ, 80 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. 3500 ಕಿಲೋ ಮೀಟರ್ ರಸ್ತೆ ಹಾಳಾಗಿದೆ. 365 ಕಟ್ಟಡ, 250 ಸೇತುವೆ ಪ್ರವಾಹದಿಂದ ಕುಸಿದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಜನ ತತ್ತರಿಸಿ ಹೋಗಿದ್ದಾರೆ. ಹೋದ ವರ್ಷ ಬಂದ ನೆರೆಗೂ ಜನ ತತ್ತರಿಸಿ ಹೋಗಿದ್ದರು.ಆ ಸಂದರ್ಭದಲ್ಲಿ ಸಹ ಜನ ರಕ್ಷಣೆಗೆ ಬರುವಲ್ಲಿ ರಾಜ್ಯ ಬಿಜೆಪಿ  ಸರ್ಕಾರ ವಿಫಲವಾಯಿತು ಎಂದು ಆರೋಪಿಸಿದರು.

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸಹ  ಪ್ರವಾಹದಲ್ಲಿ ಸಿಲುಕಿ ತತ್ತರಿಸಿದ ಜನರ ರಕ್ಷಣೆಗೆ ಬರಲಿಲ್ಲ. ಚುನಾವಣೆ ಸಮಯದಲ್ಲಿ ನಮ್ಮದು ಡಬಲ್ ಎಂಜಿನ್ ಸರ್ಕಾರ ಅಂತ ಹೇಳಿದ್ರು. ಆದ್ರೆ  ಕೇಂದ್ರ ಸರ್ಕಾರ ಜನರ ಸಂಕಷ್ಟಗಳಿಗೆ ಮಾತ್ರ ಸ್ಪಂದಿಸುತ್ತಿಲ್ಲ. ಕಳೆದ ಬಾರಿ ಸೌಜನ್ಯಕ್ಕೂ ರಾಜ್ಯದ ನೆರೆ ಅಧ್ಯಯನಕ್ಕೆ ಪಿಎಂ ಮೋದಿ ಬರಲಿಲ್ಲ. ಕಳೆದ ವರ್ಷ ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಎಷ್ಟು ಮನೆ ಕಟ್ಟಿ ಕೊಟ್ಟಿದೆ..? ಯಾವ ರೀತಿ ಅವರಿಗೆ ಸಹಾಯ ಆಗಿದೆ ಅನ್ನೋದರ ಬಗ್ಗೆ  ಶ್ವೇತಪತ್ರ ಹೊರಡಿಸಲಿ ಎಂದು ಈಶ್ವರ್ ಖಂಡ್ರೆ ಆಗ್ರಹಿಸಿದರು.

ಅಂಜುಬುರುಕ ಸಂಸದರನ್ನ ರಾಜ್ಯದ ಜನ ಆರಿಸಿದ್ದಾರೆ.

ಪ್ರವಾಹದಿಂದ 10 ಸಾವಿರ ಕೋಟಿ ನಷ್ಟವಾಗಿದೆ. ಆದರೆ 450 ಕೋಟಿ ರೂ. ಮಾತ್ರ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಪ್ರಧಾನಿಯವರಿಗೆ ಇವರು ಹೆದರುತ್ತಿದ್ದಾರೆ. 25  ಸಂಸದರು ರಾಜ್ಯದಿಂದ ಗೆದ್ದಿದ್ದಾರೆ. ಇಲ್ಲಿಯವರೆಗೆ ಪ್ರಧಾನಿಯವರ ಮೇಲೆ ಒತ್ತಡ ತರ್ತಿಲ್ಲ. ಅಂಜುಬುರುಕ ಸಂಸದರನ್ನ ರಾಜ್ಯದ ಜನ ಆರಿಸಿದ್ದಾರೆ ಎಂದು ಈಶ್ವರ್ ಖಂಡ್ರೆ ಲೇವಡಿ ಮಾಡಿದರು.kpcc-office-ishwar-khandre-termed-state-bjp-mps-timid

ಕೂಡಲೇ ಸರ್ಕಾರ ಕೇಂದ್ರಕ್ಕೆ ನಿಯೋಗ ಕರೆದೊಯ್ಯಬೇಕು…

ಸಿಎಂ ಪ್ರವಾಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅವರು ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವುದೇ ನೆರವು ಘೋಷಣೆ ಮಾಡಿಲ್ಲ. 14 ಸಾವಿರ ಮಂದಿಗೆ ಪರಿಹಾರವೇ ಸಿಕ್ಕಿಲ್ಲ. ರಾಜ್ಯ ಸರ್ಕಾರದ ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ. ಕೂಡಲೇ ಸರ್ಕಾರ ಕೇಂದ್ರಕ್ಕೆ ನಿಯೋಗ ಕರೆದೊಯ್ಯಬೇಕು ಅನ್ನುವುದು ನನ್ನ ಆಗ್ರಹ. ತಕ್ಷಣಕ್ಕೆ ಕೇಂದ್ರ ಸರ್ಕಾರ 5000 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಿ. ಕೇಂದ್ರದ ವಿತ್ತ ಸಚಿವರು ನಮ್ಮ ರಾಜ್ಯದ ಪ್ರತಿನಿಧಿ.ಇವರು ರಾಜ್ಯಕ್ಕೆ ಯಾವುದೇ ನೆರವು ಘೋಷಿಸುತ್ತಿಲ್ಲ. ಕೇಂದ್ರ ಸರ್ಕಾರ ಕೂಡಲೇ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಈಶ್ವರ್ ಖಂಡ್ರೆ ಆಗ್ರಹಿಸಿದರು.  ಸುದ್ಧಿಗೋಷ್ಠಿ ವೇಳೆ ಶಾಸಕರಾದ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.

Key words: KPCC- office- Ishwar Khandre- termed -state -BJP MPs- timid.